You are here
Home > Koppal News > ಕರಡಿ ಸಂಗಣ್ಣ ಅಭಿವೃದ್ಧಿಯ ಹರಿಕಾರ : ಅಮರನಾಥ ಪಾಟೀಲ

ಕರಡಿ ಸಂಗಣ್ಣ ಅಭಿವೃದ್ಧಿಯ ಹರಿಕಾರ : ಅಮರನಾಥ ಪಾಟೀಲ

ಹಂದ್ರಾಳ, ೨೪: ಕರಡಿ ಸಂಗಣ್ಣನವರು ಅಭಿವೃದ್ಧಿಯ ಹರಿಕಾರರಾಗಿದ್ದು, ಅವರು ಈ ಕ್ಷೇತ್ರಕ್ಕೆ ಅಪಾರ ಕೆಲಸಗಳ ಮೂಲಕ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಂತೂ ಅವರ ಪಾತ್ರ ಹಿರಿದಾದುದು. ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಮೊರಾರ್ಜಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಎಲ್ಲವೂ ಇವರ ಸಾಧನೆಗಳಾಗಿವೆ. ಇವರ ಮನಸ್ಸು ಸದಾ ಅಭಿವೃದ್ಧಿಗೆ ತಡಕಾಡುತ್ತಿರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಹಂದ್ರಾಳ ಗ್ರಾಮದಲ್ಲಿ ನಡೆದ ಬಿ.ಜೆ.ಪಿ. ಪ್ರಚಾರ ಸಭೆಯಲ್ಲಿ ೨೪.೦೪.೧೩ ರಂದು ಮೇಲಿನಂತೆ ಹೇಳಿದರು.
ಭಾರತೀಯ ಜನತಾ ಪಕ್ಷವು ೧೨ ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ ಸೈಕಲ್ ವಿತರಣೆ, ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಯುವ ಕಲ್ಯಾಣಕ್ಕಾಗಿ ಯೋಜನೆಗಳಲ್ಲದೇ, ಕನಕ ಜಯಂತಿ ಮತ್ತು ವಾಲ್ಮೀಕಿ ಜಯಂತಿಗಳನ್ನು ಸರಕಾರದಿಂದ ಆಚರಣೆ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಲದ ಕೊಪ್ಪಳದ ಅಭಿವೃದ್ಧಿಯ ಮುಂದುವರಿಕೆಗೆ ಕರಡಿ ಸಂಗಣ್ಣನವರನ್ನು ಬೆಂಬಲಿಸಬೇಕೆಂದು ಅವರು ಹೇಳಿದರು. ಮತಯಾಚನೆಯ ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಎಚ್. ಗಿರೇಗೌಡ ಮಾತನಾಡಿ ದಣಿವರಿಯದ ಜನನಾಯಕ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕರಡಿ ಸಂಗಣ್ಣನವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಮಾತನಾಡಿ ಕೊಪ್ಪಳದಲ್ಲಿ ೪೦೦೦ ಮನೆಗಳ ನಿರ್ಮಾಣ, ವಿವಿಧ ವಾರ್ಡುಗಳ ಅಭಿವೃದ್ಧಿ, ಜಿಲ್ಲ ಕ್ರೀಡಾಂಗಣಕ್ಕೆ ೩ ಕೋಟಿ ರೂ ಅನುದಾನ ಕೊಟ್ಟ ಕೀರ್ತಿ ಕರಡಿ ಸಂಗಣ್ಣನವರಿಗೆ ಸಲ್ಲುತ್ತದೆ. ಈ ಸಲವೂ ಅವರಿಗೆ ಮತ ಹಾಕಿ ಗೆಲ್ಲಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಪೀರಾಹುಸೇನ ಹೊಸಳ್ಳಿ, ತಾ.ಪಂ. ಮಾಜಿ ಸದಸ್ಯ ಮಹಾಂತೇಶ ಪಾಟೀಲ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಹಿರಿಯ, ಯುವ ಮುಖಂಡರು, ಕಾರ್ಯಕರ್ತರು, ಹಂದ್ರಾಳ ಗ್ರಾಮದ ಹಿರಿಯರು, ಬಿ.ಜೆ.ಪಿ. ಅಭಿಮಾನಿಗಳು ಭಾಗವಹಿಸಿದ್ದರು.
೬ನೇ ವಾರ್ಡಿನಲ್ಲಿ (ವಾರಕಾರ ಓಣಿ-ಜೋಗಿ ಬಂಡಿಯ) ಸಿಟಿ ಮೊಬೈಲ್ ಸರ್ವೀಸ್ ಮಾಲೀಕರು ನಾಸೀರ್ ಹುಸೇನ್, ಮುಡಿ ಮಲ್ಲಣ್ಣ ನಗರಸಭೆ ಸದಸ್ಯರು, ಇಕ್ಬಾಲ್ ಸೇಟ್, ಇಸಾಕ್ ಚೌದ್ರಿ, ಸಮೀವುರ್ ರೆಹಮಾನ್, ಖಾದರ್ ಸಾಬ್, ಶಬ್ಬೀರ್ ಟೈಲರ್, ಜಿಲಾನ್ ಮೆಕ್ಯಾನಿಕ್, ಮುಕ್ತಿಯಾರ್, ಫಾರುಕ್, ವೆಂಕಟೇಶ ಮಿಠಾಯಿ, ವೆಂಕಟೇಶ ಸುಂದರಮ್, ಈರಣ್ಣ ಟಾಂಗಾ, ಪ್ರಾಣೇಶ ಇನ್ನಿತರರು ಬಸವರಾಜ ನೀರಲಗಿ (ಕೇಬಲ್ ಆಪರೇಟರ್) ಇವರ ನೇತೃತ್ವದಲ್ಲಿ ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡಿಯಾಗಿದ್ದಾರೆ.
  ಬಿಸರಳ್ಳಿ ಗ್ರಾಮದಲ್ಲಿ ಮತಯಾಚನೆ ಮಾಡುತ್ತಿರುವ ಕರಡಿ ಸಂಗಣ್ಣನವರು ಜನರನ್ನುದ್ದೇಶಿಸಿ ಮಾತನಾಡುತ್ತಿರುವುದು.

: ಬಿಕನಳ್ಳಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣನವರಿಗೆ ಅರತಿ ಮಾಡಿ ಗೆಲ್ಲಲೆಂದು ಆಶಿಸಿ, ಅತ್ಮೀಯವಾಗಿ ಸ್ವಾಗತಿಸುತ್ತಿರುವ ಬಿಕನಳ್ಳಿ ಗ್ರಾಮದವರು.

Leave a Reply

Top