ಸದನದಲ್ಲಿ ಮೂಬೈಲ್‌ನಲ್ಲಿ ಚಿತ್ರ ವೀಕ್ಷಿಸಿದ ಶಾಸಕರನ್ನು ಶಾಸಕಸ್ಥಾನದಿಂದ ಅನರ್ಹಗೊಳಿಸಿ

ಕೊಪ್ಪಳ : ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿಬಣ) ಜಿಲ್ಲಾ ಘಟಕದಿಂದ ಮನವಿ. ಡಿಸೆಂಬರ ೦೯ ರಿಂದ ಉತ್ತರಕರ್ನಾಟಕ ಭಾಗದ ಅಭಿವೃದ್ದಿಗಾಗಿ ಹಾಗೂ ಈ ಭಾಗದ ರೈತರ ಏಳಿಗೆಗಾಗಿ ರಾಜ್ಯ ಸರ್ಕಾರವು ಚೆರ್ಚಿಸಲು ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಹಮ್ಮಿಕೊಂಡಿರುವುದರಿಂದ ಈ ಭಾಗದ ಜನರ ಸಮಸ್ಯಗಳ ಈಡೇರುತ್ತವೆ ಎನ್ನುವ ಆಶಾಭಾವನೆ ಮೂಡಿದೆ. ಆದರೇ ಇಂತಹ ಗಂಭೀರ ಸಮಸ್ಯಗಳನ್ನು ಚೆರ್ಚಿಸಬೇಕಾದ ಜವಾಬ್ದಾರಿಯುತ ಜನಪ್ರತಿನಿಧಿಗಳು  ಶಾಸಕರಾದ ಔರಾದ ಕ್ಷೇತ್ರದ ಪ್ರಭು ಚೌವ್ಹಾಣ, ಬೆಂಗಳೂರಿನ ರವಿ ಸುಬ್ರಮಣ್ಯ, ಹಿರೇಕೆರೂರಿನ ವಿ.ಬಿ.ಬಣಕಾರ ಹಾಗೂ ವಸತಿ ಸಚಿವರಾದ ಅಂಬರೀಶರವರು ಸಹ ಅಧಿವೆಶನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದಲ್ಲದೇ ಮೂಬೈಲ್‌ನಲ್ಲಿ ಚಿತ್ರಗಳನ್ನು ವೀಕ್ಷಿಸುವುದು ಸೇರಿದಂತೆ ನಾಚಿಕೆಗೇಡುತನ ಸಂಗತಿಯಾಗಿದೆ.
ಈ ಹಿಂದೆ ಸಚಿವರಾದ ಕೃಷ್ಣಪಾಲೇಮರ್,ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಅವರು ಸದನದಲ್ಲಿ ನೀಲಿಚಿತ್ರ ವೀಕ್ಷಿಸಿ ದೇಶದ ಸಂವಿಧಾನಕ್ಕೆ ಅಪಮಾನ ವೆಸಗುವುದಲ್ಲದೇ ಮಹಿಳೆಯರನ್ನು ಅಸಭ್ಯವಾಗಿ ಕಾಣುತ್ತಾ ನಮ್ಮ ಸಂಸ್ಕೃತಿಗೆ ಧಕ್ಕೆ ತಂದಿರುವ ಘಟನೆ ಮಾಸದ ಮುನ್ನವೇ ಇದೇ ರೀತಿ ವರ್ತನೆ ಮುಂದುವರೆದಿರುವುದು ಶಾಸಕರ ಬೆಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಇದರಿಂದ ಸದನದ ಅಮೂಲ್ಯ ಸಮಯ ಹಾಳಾಗುವುದಲ್ಲದೇ ಸಾರ್ವಜನಿಕರ ತೆರಿಗೆ ಹಣವೂ ಪೋಲಾಗುತ್ತಿದೆ. ಒಂದು ದಿನದ ಅಧಿವೇಶನದ ಖರ್ಚು ಬರೋಬ್ಬರಿ ಒಂದು ಕೋಟಿ ರೂಗಳಿಗೂ ಅಧಿಕವಾಗಿದ್ದು ಸುಮಾರು ಕೋಟಿ ರೂಗಳನ್ನು ವ್ಯಯಮಾಡುವುಲ್ಲದೇ ಜನಪ್ರತಿನಿಧಿಗಳು ಸಾರ್ವಜನಿಕರ ಹಾಗೂ ಮತದಾರರಿಗೆ ಎಲ್ಲದಕ್ಕೂ ಹೆಚ್ಚಾಗಿ ನಮ್ಮ ರಾಷ್ಟ್ರದ ಸಂವಿಧಾನಕ್ಕೆ ಅಪಮಾನಮಾಡುತ್ತಿದ್ದಾರೆ. ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಸೇರಿದಂತೆ ಸದನದ ಒಳಗೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮೂಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಬೇಕು ಹಾಗೂ ಕಾಲಾಹರಣ ಮಾಡಿದ ಶಾಸಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ಶಾಸಕತ್ವವನ್ನು ಅನರ್ಹಗೊಳಿಸಬೇಕಂದು ಈ ಮೂಲಕ ಕರವೇ ಸ್ವಾಭಿಮಾನಿಬಣ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದರ ಮೂಲಕ ಆಗ್ರಹಿಸುತ್ತದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಜೇಶ ಅಂಗಡಿ, ಕೊಪ್ಪಳ ತಾಲೂಕ ಅಧ್ಯಕ್ಷರಾದ ನಾಗರಾಜ ಹ್ಯಾಟಿ, ಕೊಪ್ಪಳ ನಗರ ಘಟಕದ ಅಧ್ಯಕ್ಷರಾದ ಆನಂದ ಜಾಲಿಹಾಳ, ಕೊಪ್ಪಳ ತಾಲೂಕ ಯುವಘಟಕ ಅಧ್ಯಕ್ಷರಾದ ಕೊಟೇಶ ಮ್ಯಾಗಳಮನಿ, ಗಂಗಾವತಿ ನಗರ ಘಟಕದ ಅಧ್ಯಕ್ಷರಾದ ಗುರಸಿದ್ದಪ್ಪ  ಬೊವಿವ, ಸದಸ್ಯರಾದ ಶಿವಾನಂದ ಹಾದಿಮನಿ, ಮಂಜುನಾಥ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply