ಅಳವಂಡಿಯಲ್ಲಿ ಕೃಷಿ ವಿಚಾರ ಸಂಕೀರ್ಣ

ಕೊಪ್ಪಳ- ತಾಲೂಕಿನ ಅಳವಂಡಿ ಗ್ರಾಮದಲ್ಲಿ ಕೃಷಿ ವಿಚಾರ ಸಂಕಿರ್ಣ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರಧiಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ ಮತ್ತು ಗ್ರಾಮ ಪಂಚಾಯತ ಅಳವಂಡಿ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಪರಮ ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಾಹಾ ಸ್ವಾಮಿಗಳು ಉದ್ಘಾಟಿಸಿದರು. ಪ್ರಸ್ತಾವಿಕವಾಗಿ ಯೋಜನಾಧಿಕಾರಳಾದ ಸುರೇಂದ್ರ ನಾಯಕ್ ಯೋಜನೆಯಲ್ಲಿರುವ ಹಲವಾರು ಯೋಜನೆ ಉದ್ದೇಶಗಳ ಬಗ್ಗೆ ವಲಯ ಮಟ್ಟದಲ್ಲಿ ಕೃಷಿ ಸಂಕಿರ್ಣ ಕಾರ್ಯಕ್ರಮ ಹಮ್ಮಿಕೊಂಡು ಪ್ರಗತಿಪರ ಕೃಷಿಕರಿಂದ  ಇಲಾಖೆಯ ಸಿಬ್ಬಂದಿಗಳಿಂದ ಕೃಷಿ ಅಭಿವೃದ್ಧಿಗೆ ಸಂಬಂದಿಸಿದ ವಿಷಯಗಳ ಬಗ್ಗೆ ವಿಚಾರ ಗೋಷ್ಠಿ ಮಾಡುವು ಮೂಲಕ ರೈತರ ಕೃಷಿಕರಿಗೆ ಮಾರ್ಗದರ್ಶನ ಮಾಡುತ್ತದೆ ಎಂದು ಯೋಜನೆ ಮಹತ್ವ ಕುರಿತು ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ನಾಗಪ್ಪ ಮಾಸ್ತರ ಸವಡಿ ನಿವೃತ್ತ ಉಪನ್ಯಾಸಕರು ಸ್ವ – ಸಹಾಯದ ಸಂಘಗಳನ್ನು ರಚನೆ ಮಾಡಿ ಆರ್ಥಿಕ ಪ್ರಗತಿ ಸಾದಿಸುವುದರೊಂದಿಗೆ ಮಹಿಳೆಯರಲ್ಲಿ ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ರೈತರಿಗೆ ಕೃಷಿಕರಿಗೆ ಇಂತಹ ವಿಚಾರ ಗೋಷ್ಠಿ ಮೂಲಕ ಜನರಲ್ಲಿ ಕೃಷಿ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ಮಾತನಾಡಿದರು. ಈಲ್ಲಾ ನಿರ್ದೇಶಕರಾದ ಹೆ.ಎಲ್ ಮುರಳಿಧರ ಅವರು ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ತೆಗೆದುಕೊಂಡು ಯೋಜನೆಯನ್ನು ಸಫಲಗೊಳಿಸಬೇಕು ಕರ್ನಾಟಕ ಸರ್ಕಾರ ಮತತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಭಾಗಿತ್ವದಲ್ಲಿ ಕೃಷಿಯಂತ್ರೋಪಕರಣಗಳ ಬಾಡಿಗೆ ಸೇವಾಕೇಂದ್ರ ದ ಮೂಲಕ ರೈತರಿಗೆ ಕೃಷಿಕರಿಗೆ ಪ್ರತಿಯೊಬ್ಬರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮಾತನಾಡಿದರು.
    ಈ ಕಾರ್ಯಕ್ರಮದಲ್ಲಿ ಪಕೀರಮ್ಮ ಜಂತ್ಲಿ, ಮುದ್ದಮ್ಮ ಕರಡಿ, ರೈತ ಮುಖಂಡ ಬಸವರೆಡೆಪ್ಪ ಹಳ್ಳೀಕೇರಿ, ಚಂದನಗೌಡ ಪಾಟೀಲ, ಹಿರೇಹಾಳ ಚೌಡಪ್ಪಜತ್ಲಿ, ವೆಂಕಟರೆಡ್ಡಿ ಲಿಂಗಾರಡ್ಡಿ ಉಪಸ್ಥಿತರಿದ್ದರು.
ವಿರೇಶ ಹಾಲಗುಂಡಿ ನಿರೂಪಿಸಿದರು. ಲಕ್ಷ್ಮಪ್ಪ ಕಂಬಳಿ ವಂದಿಸಿದರು.

Related posts

Leave a Comment