ಗ್ರಾಹಕ ಚಟುವಟಿಕೆ ನಡೆಸುತ್ತಿರುವ ಎನ್.ಜಿ.ಓ ಗಳಿಂದ ಅರ್ಜಿ ಆಹ್ವಾನ

 ಗ್ರಾಹಕ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ನಿರ್ವಹಣೆಗೆ ಆಸಕ್ತ ಎನ್.ಜಿ.ಓ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
  ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರ ಅನ್ವಯ ಗ್ರಾಹಕರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಸಲುವಾಗಿ ಗ್ರಾಹಕ ಸಂಬಂಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ಗ್ರಾಹಕ ಚಟುವಟಿಕೆ ನಡೆಸುತ್ತಿರುವ ಎನ್.ಜಿ.ಓ./ವಿಸಿಓಯಿಂದ ಒಂದು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಹಕ ಚಟುವಟಿಕೆ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಎನ್.ಜಿ.ಓ./ವಿಸಿಓಗಳು ನಿಗದಿತ ನಮೂನೆ ಡಿuಟe2 (ಛಿ) oಜಿ sಣಚಿಣe ಛಿoಟಿsumeಡಿ Weಟಜಿಚಿಡಿe ಈuಟಿಜ ಖuಟe 2005 ಅರ್ಜಿ ನಲ್ಲಿ ಪೂರ್ಣ ಮಾಹಿತಿಗಳನ್ನು ಭರ್ತಿ ಮಾಡಿ ಜೂ.30 ರೊಳಗಾಗಿ ಸಲ್ಲಿಸಬಹುದಾಗಿದೆ. 
ಅರ್ಜಿ ಸಲ್ಲಿಸಿದ ಅರ್ಜಿದಾರರ ಪೈಕಿ ಅರ್ಹ ಒಂದು ಎನ್.ಜಿ.ಓ./ವಿಸಿಓಗಳು ಅರ್ಜಿಗಳನ್ನು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ತೆರೆಯಲು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಕೇಂದ್ರ ತೆರೆಯುವ ಆಸಕ್ತಿಯುಳ್ಳ ಎನ್.ಜಿ.ಓ./ವಿಸಿಓಗಳು ನಿಗದಿತ ಅವಧಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್  ತಿಳಿಸಿದ್ದಾರೆ. 
Please follow and like us:

Leave a Reply