ಬಿ. ಎಫ್. ಬೀರನಾಯಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ, ಅಭಿನಂದನೆ

ಕೊಪ್ಪಳ, ಅ. ೦೬ : ಜಿಲ್ಲಾ ಗ್ರಹರಕ್ಷಕದಳದ ಸ್ಟಾಫ್ ಆಫೀಸರ್ ಬಿ. ಎಫ್. ಬೀರ ನಾಯಕ ಅವರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿನ ವಿವಿಧ ಕರ್ತವ್ಯಗಳಿಗೆ ಗೃಹರಕ್ಷಕರನ್ನು ನಿಯೋಜಿಸಿ ಸಕ್ರೀಯವಾಗಿ ಪಾಲ್ಗೊಂಡು, ಅಕಾಡೆಮಿಯಲ್ಲಿ ಅನೇಕ ತರಬೇತಿಗಳನ್ನು ಪಡೆದು ಬಂದೋಬಸ್ತ್, ರಾಷ್ಟ್ರೀಯ ಹಬ್ಬಗಳ ಕಾವಾಯತುಗಳಲ್ಲಿ, ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವಲ್ಲಿ, ಗೃಹರಕ್ಷಕರ ವೃತ್ತಿಪರ ಕ್ರಿಡಾಕೂಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಾರ್ವಜನಿಕರ ಮತ್ತು ಅಧಿಕಾರಿಗಳ ಮನ್ನಣೆ ಗಳಿಸಿ ಹಲವಾರು ವಾರ್ಷಿಕ ತರಬೇತಿಗಳನ್ನು ನೀಡಿ ಕೊಪ್ಪಳ ಜಿಲ್ಲಾ ಗೃಹರಕ್ಷಕ ದಳವನ್ನು ಸಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ. 
ಪದಕ ಪಡೆದಿರುವ ಜಿಲ್ಲಾ ಗೃಹರಕ್ಷಕದಳದ ಸಾಫ್ಟ್ ಆಫೀಸರ್ ಬಿ. ಎಫ್. ಬೀರನಾಯಕ ಅವರನ್ನು ಜಿಲ್ಲೆಯ ಗೃಹರಕ್ಷಕರು, ಅಧಿಕಾರಿಗಳು ಹಾಗೂ ಸಮಾದೇಷ್ಟರಾದ ರವೀದ್ರ ಶೀಗನಹಳ್ಳಿ ಅಭಿನಂದಿಸಿದ್ದಾರೆ.
Please follow and like us:
error