ಜ್ಞಾನಕ್ಕಾಗಿ ಶಿಕ್ಷಣ ಹೊರತು ಉದ್ಯೋಗಕ್ಕಾಗಿ ಅಲ್ಲ- .ಬಸವರಾಜ ಪಾಟೀಲ ಸೇಡಂ.

ಕೊಪ್ಪಳ: ಜೀವನದಲ್ಲಿ ತಮಗಾಗಿ ಕೈಚಾಚುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಮತ್ತೊಬ್ಬರ ಏಳ್ಗೆಗಾಗಿ ಕೈಚಾಚುವಂತಾಗಬೇಕು. ಇದೇ ನಿಜವಾದ  ಜೀವನದ ದರ್ಶನವೆಂದು ರಾಜ್ಯಸಭಾ

ಸದಸ್ಯರಾದ ಶ್ರೀಬಸವರಾಜ ಪಾಟೀಲ ಸೇಡಂ ನುಡಿದರು. ಅವರಿಂದು ಶ್ರೀಗವಿಸಿದ್ಧೇಶ್ವರ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಜಂಟಿಯಾಗಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಲ್ಲಿ  ವ್ಯಕ್ತಿತ್ವ ವಿಕಾ ಮೂಡಿಸುವಂತಹ  ಜೀವನ ದರ್ಶನ ಎಂಬ ವಿನೂತನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ನುಡಿದರು. ಮುಂದುವರಿದು ಮಾತನಾಡಿ  ಜ್ಞಾನಕ್ಕಾಗಿ ಶಿಕ್ಷಣ ಹೊರತು ಉದ್ಯೋಗಕ್ಕಾಗಿ ಅಲ್ಲವೆಂಬ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು. ಪ್ರತಿಯೊಬ್ಬರಿಗೂ ಬದುಕಿನಲ್ಲಿ ಜ್ಞಾನದ ಅವಶ್ಯಕತೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ ಜ್ಞಾನವನ್ನು ಪಡೆಯಬೇಕಾಗಿದೆ. ಮತ್ತು ಎತ್ತರದ ಕನಸನ್ನು ಕಾಣುವದರ ಜೊತೆಗೆ ಅದನ್ನು ನನಸಾಗಿಸಿಕೊಳ್ಳುವ ಮಹತ್ವಾಕಾಂಕ್ಷೆ ಇರಬೇಕು.   ಇದರಿಂದಾಗಿ ನಿಮ್ಮ  ಬದುಕು ಅಸಾಧಾರಣವಾಗುತ್ತದೆ ಎಂದರು.

ಸಾನಿಧ್ಯವನ್ನು ವಹಿಸಿ ಮಾತನಾಡಿದ ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು  ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಂದೆತಾಯಿಗಳ ಶ್ರಮದ ಬೆವರಿನ ಮಹತ್ವ ಅರಿತು ಬಿಡುವಿಲ್ಲದೇ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಇವರ ಸೇವೆಯ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆದರ್ಶರಾಗಿ ಬದುಕಬೇಕೆಂದು  ಆಶಿರ್ವಚನ ನೀಡಿದರು. ಇದೇ ವೇದಿಕೆಯಲ್ಲಿ ನಿವೃತ್ತಿಗೊಂಡ  ಪ್ರಾಧ್ಯಾಪಕ ಎಂ.ಎಂ.ಕಂಭಾಳಿಮಠ ಅವರನ್ನು ಸನ್ಮಾನಿಸಲಾಯಿತು.  ಶ್ರೀಗವಿಸಿದ್ಧೇಶ್ವರ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು  ಪ್ರ್ರಾಚಾರ್ಯರು,ಟ್ರಸ್ಟ ಕಾರ್ಯದರ್ಶಿಗಳು ಹಾಗು ಸದಸ್ಯರು, ಶಿಕ್ಷಕ ಹಾಗು ಶಿಕ್ಷಕೇತರ ಸಿಬ್ಬಂಧಿಗಳು, ನಗರದ  ಪ್ರಮುಖರು  ಉಪಸ್ಥಿತರಿದ್ದರು. ನಿರುಪಣೆ ಹಾಗೂ ವಂದಾನರ್ಪಣೆ ಪ್ರೊ. ಶರಣಬಸಪ್ಪ ಬಿಳಿಯಲಿ ನಿರ್ವಸಿದರು.

Leave a Reply