ಕನಕ ಸಾಂಸ್ಕೃತಿಕ ಪರಿಷತ್ತು ಗಂಗಾವತಿ ಘಟಕದ ಅಧ್ಯಕ್ಷರಾಗಿ ಬಿ. ದುರುಗಪ್ಪ ಆಯ್ಕೆ

ಕೊಪ್ಪಳ, ಆ.೨೨ : ಕನಕ ಸಾಂಸ್ಕೃತಿಕ ಪರಿಷತ್ತಿನ ಗಂಗಾವತಿ ತಲೂಕು ಘಟಕದ ಅಧ್ಯಕ್ಷರಾಗಿ ಮುಕ್ಕುಂಪಿಯ ಬಿ. ದುರುಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಸಾಪಟ್ಟಣದ ದ್ಯಾಮಣ್ಣ ಅಂಗಡಿ ಅವರ ಅಧ್ಯಕ್ಷತೆಯಲ್ಲಿ ಗಂಗಾವತಿಯ ಮಂಥನ ಸಭಾಂಗಣಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಕೊಳ್ಳಲಾಯಿತು.
ಗುಂಡೂರಿನ ಕೆ. ಈರಪ್ಪ ಈರಗಾರ ಹಾಗೂ ಮಲ್ಲಪ್ಪ ಕಡ್ಲಿ ಅವರು ಗೌರವಾಧ್ಯಕ್ಷರಾಗಿರುತ್ತಾರೆ. ಪಿ. ಸೋಮಶೇಖರ ಸಿದ್ದಾಪೂರ ಹಾಗೂ ಶಂಕರಗೌಡ ದಳಪತಿ ಇವರನ್ನು ಉಪಾಧ್ಯಕ್ಷರನ್ನಾಗಿ, ಹನುಮಂತಪ್ಪ ಕನಕಗಿರಿ ವಕೀಲರು ಪ್ರಧಾನ ಕಾರ್ಯದರ್ಶಿ ಮತ್ತು ಫಕೀರಯ್ಯ ಢಣಾಪೂರ ಹಾಗೂ ಶಿವರಾಜ ಚನ್ನಳ್ಳಿ ಸಹಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಜೆ. ಅಯ್ಯಪ್ಪ ಯರಡೋಣಿ, ದುರುಗಪ್ಪ ಪಚ್ಚಿ, ಬಿ. ವಿಠ್ಠಲ ಶಿಕ್ಷಕರು ಉಳೇನೂರ, ಕೆ. ಬಾಳಪ್ಪ ವೆಂಕಟಗಿರಿ, ಬಿ. ಹನುಮಂತಪ್ಪ ಸಿಂಗನಾಳ, ಎಂ. ಹನುಮಂತಪ್ಪ ಢಣಾಪೂರ ಮುಂತಾದವರು ಸಮಿತಿಯ ಸದಸ್ಯರಾಗಿರುತ್ತಾರ. ಕೆ. ಮಂಜುನಾಥ, ದ್ಯಾಮಣ್ಣ ಅಂಗಡಿ, ಕೆ. ನರಸಪ್ಪ, ರಾಜಪ್ಪ ಬುರಡಿ ಹಣವಾಳ, ರಾಚಪ್ಪ ಹಾಲಬಾವಿ, ಎಸ್.ಟಿ. ಈರಪ್ಪ, ಕೆ. ಬಿ. ಜೂಡಿ, ಭೀಮನಗೌಡ ಪಾಟೀಲ ಇತರರು ವಿಶೇಷ ಅಹ್ವಾನಿತರಾಗಿರುತ್ತಾರೆ.
ಕನಕ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಗೌರವಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ, ಕುಷ್ಟಗಿ ತಾಲೂಕ ಕಸಾಪ ಅಧ್ಯಕ್ಷ ಚಂದಪ್ಪ ಹಕ್ಕಿ ಮುಂತಾವರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಆಕಳವಾಡಿ  ಲ್ಲಿ ತಿಳಿಸಿದ್ದಾರೆ.

Leave a Reply