ಸಿನಿಮೋತ್ಸವ : ನ. ೧೯ ರಂದು ಪ್ರದರ್ಶನಗೊಳ್ಳುವ ಚಿತ್ರಗಳು

  ಕರ್ನಾಟಕ ಚಲನಚಿತ್ರ ಅಕಾಡೆಮಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನ. ೧೪ ರಿಂದ ೨೦ ರವರೆಗೆ ಏರ್ಪಡಿಸಲಾಗಿರುವ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದ ಅಂಗವಾಗಿ ನ. ೧೯ ರಂದು ಬೆಳಿಗ್ಗೆ ೮-೩೦ ಗಂಟೆಗೆ ಶಾರದಾ ಚಿತ್ರಮಂದಿರದಲ್ಲಿ-  ಚಿಲ್ದ್ರನ್ ಆಫ್ ಹೆವೆನ್, ಲಕ್ಷ್ಮಿ-  ಇನುಕ್, ಕನಕಾಚಲ- ಇನುಕ್ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಚಿಲ್ಡ್ರನ್ ಆಫ್ ಹೆವೆನ್ (ಇರಾನ್) : ಝೋಹ್ರಾಳ ಶೂ ಮಾಯ, ಅವಳಣ್ಣ ಅಲಿಯೇ ಕಳೆದದ್ದು. ಬಡವರಾದ ಅವರಿಗೆ ಇನ್ನೊಂದು ಜೊತೆ ಶೂ ಎಲ್ಲಿಂದ ಬರಬೇಕು. ಏನಾದರೂ ಉಪಾಯ ಹೂಡಬೇಕು. ಇರುವ ಒಂದೇ ಜೊತೆಯನ್ನು ಅವರು ಶಾಲೆ ಸಮಯಕ್ಕೆ ಸರಿಹೊಂದುವಂತೆ ಹಂಚಿಕೊಳ್ಳುತ್ತಾರೆ. ಅವರ ಉಪಾಯ ಎಷ್ಟು ದಿನ ನಡೆಯಬಹುದು? ಚಿತ್ರ ಕುತೂಹಲಕಾರಿಯಾಗಿ ಮೂಡಿಬಂದಿದೆ.
ಇನುಕ್ (ಗ್ರೀನ್ ಲ್ಯಾಂಡ್) : ಇನುಕ್ ಆರ್ಕ್‌ಟಿಕ್ ಎಂಬ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ಏಳು ವರ್ಷದ ಬಾಲಕ. ಒಂದು ಸಲ ಅವನಿಗೆ ಮಾಂತ್ರಿಕ ಅಂಮ್ಯುಲೆಟ್ ಸಿಗುತ್ತದೆ. ಅದರಿಂದ ಅವನು ಪ್ರಾಣಿಗಳೊಂದಿಗೆ ಸಂವಹನ ನಡೆಸುವ ವಿಶೇಷವಾದ ಶಕ್ತಿ ಪಡೆಯುತ್ತಾನೆ. ಇನುಕ್ ತನ್ನ ಸ್ನೇಹಿತರ ಜೊತೆಗೂಡಿ ಸಂಶೋಧನಾ ವಿಷಯವಾಗಿ ತನ್ನದೇ ಆದ ಒಂದು ಸ್ವಂತ ಅನ್ವೇಷಣಾ ಯಾತ್ರೆ ಕೈಗೊಳ್ಳುತ್ತಾನೆ. ಅದು ಒಂದು ವಿಶ್ವ ಪರ್ಯಟನೆಯ ಜೊತೆ ಜೊತೆಗೆ ತನ್ನನ್ನು ತಾನು ಕಂಡುಕೊಳ್ಳುವ ಯಾತ್ರೆಯಾಗಿಯೂ ಕಂಡು ಬರುತ್ತದೆ.

Leave a Reply