ಸರ್ವತೋಮುಖ ಅಭಿವೃದ್ದಿಗಾಗಿ ಕೆಜೆಪಿ ಬೆಂಬಲಿಸಿ : ಸಯ್ಯದ್

ಕೊಪ್ಪಳ,ಏ.೩೦: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ ಬೆಂಬಲಿಸುವುದರ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ದಿಗಾಗಿ ಕೆಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾಡಿನ ಮತ್ತು ಈ ಕ್ಷೇತ್ರದ ಅಭಿವೃದ್ದಿಗೆ ಕೆಜೆಪಿ ಬೆಂಬಲಿಸಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು.
ಅವರು ಕೊಪ್ಪಳದ ವಿವಿಧ ವಾರ್ಡ್‌ಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿ ನಂತರ ತಾಲೂಕಿನ ಐತಿಹಾಸಿಕ ಹುಲಿಗೆಮ್ಮ ಕ್ಷೇತ್ರದ ಹುಲಿಗಿ ಗ್ರಾಮದಲ್ಲಿ ಮತಯಾಚನೆ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ, ತಾಲೂಕಿನ ಗ್ರಾಮೀಣ ಭಾಗದಲ್ಲಿ ಈಗಾಗಲೇ ತಮ್ಮ ಫೌಂಡೇಶನ್ ವತಿಯಿಂದ ಉಚಿತ ಕುಡಿಯುವ ನೀರು ಪೂರೈಕೆ ಮಾಡಲಾಗಿದ್ದು, ಬಡ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ, ಕಂಪ್ಯೂಟರ್ ವಿತರಣೆ, ಪ್ರತಿ ವರ್ಷ ಸಾಮೂಹಿಕ ವಿವಾಹಗಳಿಗೆ ಸಹಾಯ ಮತ್ತು ಪ್ರೋತ್ಸಾಹ, ಗುಡಿಕೈಗಾರಿಕೆ ಕಾರ್ಯಕ್ರಮ, ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಯೋಜನೆ, ಅನಾಥ ಮತ್ತು ವೃದ್ದಾಶ್ರಮ ನಿರ್ಮಾಣಕ್ಕೆ ಸಂಕಲ್ಪ, ಪುಟ್ಟರಾಜ ಗವಾಯಿಗಳ ಸಂಗೀತ ವಿದ್ಯಾಲಯ ಕೊಪ್ಪಳದಲ್ಲಿ ಸ್ಥಾಪನೆ, ನಿರಾಶ್ರಿತ ಮಕ್ಕಳಿಗೆ ದತ್ತು ಪಡೆಯುವ ಕಾರ್ಯಕ್ರಮ, ಉಚಿತ ಶಿಕ್ಷಣ, ವಸತಿ ಸೌಕರ್ಯ, ಉದ್ಯೋಗ ಮತ್ತು ವೃತ್ತಿ ತರಬೇತಿ ಇತ್ಯಾದಿ ಯೋಜನೆಗಳನ್ನು ಸಾಕಾರಗೊಳಿಸಲು ತಮಗೆ ಬೆಂಬಲಿಸಬೇಕೆಂದು ಕೋರಿದರು.
ಮುಂದುವರೆದು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕನಸು ಸಾಕಾರಗೊಳಿಸಲು ಮತ್ತು ನಾಡಿನ ಹಾಗೂ ಕೊಪ್ಪಳ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ತಮಗೆ ಬೆಂಬಲಿಸುವಂತೆ ಇದೇ ಸಂದರ್ಭದಲ್ಲಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡರು. 
ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಹುರಕಡ್ಲಿ, ಪ್ರಚಾರ ಸಮಿತಿ ಅಧ್ಯಕ್ಷ ನೇಮಿರಾಜ ಪಾಟೀಲ್, ಮುಖಂಡರಾದ ಈಶ್ವರ ಎನ್., ಶ್ಯಾಮೀದ್ ಸಾಬ ಕಿಲ್ಲೇದಾರ, ಮೆಹಬೂಬ ಮುಲ್ಲಾ, ಸಿ.ಎಸ್.ಡಂಬಳ, ಮಾರುತಿ ಮಾಗಳದ್, ಮಹೆಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ಒದಗನಾಳ, ಬಸವರಾಜ ಬಳ್ಳಾರಿ ಅಳವಂಡಿ, ಶ್ರೀಮತಿ ರೇಣುಕಾ, ಹನುಮಂತ ಕಲಿಕೇರಿ, ಡಿ.ಕೆ.ಹಿರೇಮಠ, ಲಕ್ಷ್ಮಣ ಕವಲೂರು, ಪರಸಪ್ಪ ಲಮಾಣಿ, ಯಮನೂರಪ್ಪ ಹಾಗೂ ಪಕ್ಷದ ಹಿರಿಯ ಮುಖಂಡ ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts

Leave a Comment