ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಮಾಡಿ – ಸಿ.ಇ.ಓ ಆರ್.ರಾಮಚಂದ್ರನ್.

ಕೊಪ್ಪಳ-11- ಅಳವಂಡಿ ಗ್ರಾಮದಲ್ಲಿ ಶ್ರೀ ಬಾಂದವ್ಯ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟ ಕಛೇರಿ ಉದ್ಘಾಟನಾ ಅಂಗವಾಗಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ಗ್ರಾಮ ಪಂಚಾಯತಿ ಅಳವಂಡಿ ಸಂಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ.ಆರ್.ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸಂಕಷ್ಟದಲ್ಲಿರುವ ಬಡ ಜನರಿಗೆ ಪ್ರತಿಯೊಬ್ಬರು ರಕ್ತದಾನ ಮಾಡುವುದರ ಸಂಕಲ್ಪ ಹೊಂದಿ ರಕ್ತದಾನ ಮಾಡಿದಾಗ ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ಧೇಶಕರಾದ ರವಿ ಬಿಸರಳ್ಳಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಫಕೀರವ್ವ ಜಂತ್ಲಿ, ಉಪಾಧ್ಯಕ್ಷರಾದ ಶ್ರೀಮತಿ ಉಮಾ ಕರ್ಕಿಹಳ್ಳಿ, ಒಕ್ಕೂಟದ ಕಾರ್ಯದರ್ಶಿಯಾದ ಪ್ರತಿಭಾ ಕಲ್ಗುಡಿ, ಗವಿಶ್ರೀ ಕ್ಲಿನಿಕ್‌ನ ಡಾ. ಮಂಜುನಾಥ ಸಜ್ಜನ, ಅಮೃತಪ್ಪ ದೊಡ್ಡಮನಿ, ಪಿ.ಡಿ.ಓ. ಪ್ರಕಾಶ ಸಜ್ಜನ ಸಂಜೀವಿನಿ ವಲಯ ಮೇಲ್ವಿಚಾರಕರು ಪ್ರಸನ್ನ ಕುಮಾರ ಬಿ.ಆರ್, ಕಾರ್ಯಕ್ರಮದ ಸಂಘಟಕರಾದ ಅನ್ನಪೂರ್ಣ, ರೇಣುಕಾ ಉಪಸ್ಥಿತರಿದ್ದರು.

Please follow and like us:
error