fbpx

ಮಂಗಳಯಾನದ ಯಶಸ್ವಿ ಭಾರತ ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿದೆ – ಉಮೇಶ ಪೂಜಾರ

ಕೊಪ್ಪಳ- ಸೆಪ್ಟಂಬರ್, ೨೪ ಭಾರತವು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿ ಕಂಡಂತಹ ವಿಶ್ವದ ಪ್ರಥಮ ರಾಷ್ಟ್ರವೆನಿಸಿಕೊಂಡಿದ್ದು ಮಂಗಳಯಾನದ ಯಶಸ್ವಿಯಾಗಿ ಪೂರೈಸಿದ ಏಷ್ಯಾದ ಪ್ರಥಮ ರಾಷ್ಟ್ರ ಭಾರತ ವಿಶ್ವದ ಬಲಿಷ್ಟ ರಾಷ್ಟ್ರಗಳು ಇಂದು ಭಾರತದತ್ತ ನಿಬ್ಬೆರಗಾಗಿ ನೋಡುತ್ತೀವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ, ಉಮೇಶ ಪೂಜಾರ ಹೇಳಿದರು. 
ಅವರಿಂದ ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಮಂಗಳಯಾನದ ನೇರ ಪ್ರಸಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳಯಾನದ ಯಶಸ್ವಿಯು ಈ ದೇಶ ಮುಂದುವರೆದ ರಾಷ್ಟ್ರ ಎಂದು ವಿಶ್ವಕ್ಕೆ ಸಾಬೀತು ಮಾಡಿದೆ. ಮುಂಬರುವ ದಿನಗಳಲ್ಲಿ ವಿಜ್ಞಾನದ ಪ್ರತಿಕ್ಷೇತ್ರದಲ್ಲಿ ನಮ್ಮ ವಿದ್ಯಾರ್ಥಿಗಳು ಸಾಧನೆ ತೋರಲಿದ್ದಾರೆ. ಮಕ್ಕಳಿಗೆ ನೇರ ಪ್ರಸಾರ ವಿಕ್ಷಣೆಗೆ ಅವಕಾಶ ಕಲ್ಪಿಸಿದ ಶಾಲೆಯ ಎಸ್.ಡಿ.ಎಮ್.ಸಿ. ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿ ಭಾರತೀಯ ಬಾಹ್ಯಕಾಶ ಸಂಶೋಧನ ಸಂಸ್ಥೆ ಅತೀ ವೆಚ್ಚದಲ್ಲಿಯೇ ಮಂಗಳಯಾನ ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾದ ರಾಧಾಕೃಷ್ಣನ್ ಹಾಗೂ ಅವರ ತಂಡವನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಪರಮಾನಂದ ಯಾಳಗಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ವಿಜ್ಞಾನ ಭವನದ ನಿರ್ದೇಶಕರಾದ  ಮಹಾಂತೇಶ ಚೆನ್ನಿನಾಯಕ್ ಮಾತನಾಡಿದರು,
ಕಾರ್ಯಕ್ರಮದಲ್ಲಿ ಆದರ್ಶ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಂತೇಶ, ಸಂಯೋಜಕರಾದ ಶರಣಪ್ಪ ಹಾಗೂ ಎಮ್.ಎಚ್. ಕುರಿ, ಶಿಕ್ಷಕರಾದ ರಾಮರೆಡ್ಡಿ, ಜಯರಾಜ್ ಭೂಸದ್, ಗೋಪಾಲರಾವ್ ಗುಡಿ, ವಿಜ್ಞಾನ ಸಂಘದ ಪದಾಧಿಕಾರಿಗಳು ಹಾಗೂ ವಿಜ್ಞಾನ ಆಸಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 
Please follow and like us:
error

Leave a Reply

error: Content is protected !!