ಕೊಪ್ಪಳ : ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ

      ಕೊಪ್ಪಳ:ಜೂ.೨೬: ೨೬ನೇ ಜೂನ್ ೨೦೧೪ ರಂದು ಆಚರಿಸುವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಈ ದಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ ಎನ್.ಸಿ.ಸಿ. ಅಧಿಕಾರಿ ಶ್ರೀ ಖಾಸಿಂಸಾಬ ಸಂಕನೂರು ಇವರ ನೇತೃತ್ವದಲ್ಲಿ ಬೆಳಿಗ್ಗೆ ೦೯:೦೦ ಗಂಟೆಗೆ ಎನ್.ಸಿ.ಸಿ. ಕೇಡಿಟ್‌ಗಳ ರ್‍ಯಾಲಿ ಶಾಲೆಯಿಂದ ಪ್ರಾರಂಭವಾಗಿ ಗಡಿಯಾರ ಕಂಬದ ಮೂಲಕ ಕಿತ್ತೂರು ಚೆನ್ನಮ್ಮ ವೃತ್ತ, ತಹಶೀಲ ಕಛೇರಿ ವೃತ್ತ, ಅಶೋಕ ಸರ್ಕಲ್‌ಗಳವರೆಗೆ ಎನ್.ಸಿ.ಸಿ. ಕೇಡಿಟ್‌ಗಳು ಜನರಲ್ಲಿ ಮಾದಕ ವಸ್ತಗಳಿಂದ ದೂರವಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಂ

ಡು ದೇಶದ ಉತ್ತಮ ನಾಗರಿಕರಾಗಿರಲು ಘೋಷಣೆಗಳ ಮೂಲಕ ಮಾದಕ ವಸ್ತುಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

     ಇದೇ ಸಂದರ್ಭದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಎನ್.ಸಿ.ಸಿ. ಅಧಿಕಾರಿ ಖಾಸಿಂಸಾಬ ಸಂಕನೂರುರವರು ಎನ್.ಸಿ.ಸಿ. ಕೇಡಿಟ್ ಗಳು ದೇಶದ ದ್ವೀತೀಯ ದರ್ಜೆಯ ಸೈನಿಕರಿದ್ದ ಹಾಗೆ, ವಿದ್ಯಾರ್ಥಿಗಳ ಕಾಲಾವಧಿಯಲ್ಲಿಯೇ ಮಾದಕ ವಸ್ತುಗಳ ಬಗ್ಗೆ ತಿಳುವಳಿಕೆಯನ್ನಿಟ್ಟುಕೊಂಡು ಅವುಗಳಿಂದ ದೂರವಿರುವಂತೆ, ದೇಶದ ಉತ್ತಮ, ಸದೃಢ ನಾಗರಿಕರಾಗುವಂತೆ ತಿಳಿಸಿದರು. ಈ ರ್‍ಯಾಲಿಯಲ್ಲ ಸಂಸ್ಥೆಯ ಶಿಕ್ಷಕರಾದ ಬಸವರಾಜ ದೊಡ್ಡಮನಿ, ಖಾಸಿಂಸಾಬ ಸಂಕನೂರು ರಾಜ್ಯ ಪರಿಷತ್ ಸದಸ್ಯರು ಕ.ರಾ.ನೌ.ಸಂಘ(ರಿ) ವೆಂಕಟೇಶ ಯು. ಪ್ರಾಣೇಶ ಹೆಚ್, ಮತ್ತು ಎನ್.ಸಿ.ಸಿ. ಕೇಡಿಟ್‌ಗಳು ಪಾಲ್ಗೊಂಡು ರ್‍ಯಾಲಿಯನ್ನು ಯಶಸ್ವಿಗೊಳಿಸಿದರು.  
Please follow and like us:

Leave a Reply