ಜ್ಯೋತಿ ಸಂಜೀವಿನಿ ಆ. ೦೩ ರಂದು ಸರ್ಕಾರಿ ನೌಕರರಿಗೆ ಕಾರ್ಯಗಾರ.

ಕೊಪ್ಪಳ ಜು. ೨೯ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವಲಂಬಿತ ಕುಟುಂಬದವರಿಗೆ
ನಗದು ರಹಿತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮಾಡುವ ‘ಜ್ಯೋತಿ ಸಂಜೀವಿನಿ’ ಯೋಜನೆ
ಕುರಿತು ಸರ್ಕಾರಿ ನೌಕರರಿಗೆ ಮಾಹಿತಿ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ
ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಆ. ೦೩ ರಂದು ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ
ಜಿಲ್ಲಾಡಳಿತ ಭವನದ ಆಡಿಟೊರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದೆ.
     ರಾಜ್ಯ ಸರ್ಕಾರಿ
ನೌಕರರಿಗೆ ಮತ್ತು ಅವಲಂಬಿತ ಕುಟುಂಬದ ಸದಸ್ಯರಿಗೆ ೭ ಮಾರಣಾಂತಿಕ ಖಾಯಿಲೆಗಳಾದ
ಹೃದ್ರೋಗ, ಕ್ಯಾನ್ಸರ್, ನರರೋಗ, ಭೀಕರ ಅಪಘಾತ, ಸುಟ್ಟಗಾಯ, ಮೂತ್ರಪಿಂಡ ಖಾಯಿಲೆಗಳು
ಹಾಗೂ ನವಜಾತ ಶಿಶುಗಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ರಾಜ್ಯ ಮತ್ತು ಹೊರ ರಾಜ್ಯದ ಸೂಪರ್
ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆ ದೊರೆಯಲು
ಅನುಕೂಲವಾಗುವಂತೆ ರಾಜ್ಯ ಸರ್ಕಾರ ೨೦೧೫ ರ ಜನವರಿ ೨೦ ರಿಂದ ರಾಜ್ಯದಲ್ಲಿ ಜಾರಿಗೆ
ತಂದಿದೆ.  ಈ ಯೋಜನೆ ಕುರಿತಂತೆ ಸರ್ಕಾರಿ ನೌಕರರಿಗೆ ಸಮರ್ಪಕ ಮಾಹಿತಿ ನೀಡುವುದು ಹಾಗೂ
ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಗಸ್ಟ್ ೦೩ ರಂದು ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳದ
ಜಿಲ್ಲಾಡಳಿತ ಭವನ ಆಡಿಟೊರಿಯಂ ಹಾಲ್‌ನಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. 
ಕಾರ್ಯಗಾರದಲ್ಲಿ ಯೋಜನೆಯ ಹೊಣೆ ಹೊತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
ಬೆಂಗಳೂರು ಇಲ್ಲಿನ ಯೋಜನಾ ವ್ಯವಸ್ಥಾಪಕಿ ಡಾ. ಸುಧಾ ಚಂದ್ರಶೇಖರ್ ಅವರು ಸಂಪನ್ಮೂಲ
ವ್ಯಕ್ತಿಗಳಾಗಿ ಪಾಲ್ಗೊಂಡು ಮಾಹಿತಿ ನೀಡುವರು.  ಈ ಕಾರ್ಯಗಾರದಲ್ಲಿ ಎಲ್ಲ ಸರ್ಕಾರಿ
ನೌಕರರು ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕು ಎಂದು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ
ನಾಗರಾಜ ಜುಮ್ಮನ್ನವರ್ ಅವರು ತಿಳಿಸಿದ್ದಾರೆ.
Please follow and like us:
error