fbpx

ಆಶ್ರಯ ಸಮಿತಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕರ ಬೃಹತ್ ರ‍್ಯಾಲಿ

 ೦೯-೦೬-೨೦೧೪ ರಂದು ನಡೆದ ಆಶ್ರಯ ಸಮಿತಿಯ ಸಾಮಾನ್ಯ ಸಭೆಯಲ್ಲಿ ಮಾಡಿದ ನಿವೇಶನಗಳ ಹಂಚಿಕೆಯಲ್ಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ನ್ಯಾಯಕ್ಕಾಗಿ ಅಸಂಘಟಿತ ಕಾರ್ಮಿಕರು ದಿನಾಂಕ ೧೪-೦೭-೨೦೧೪ ರ ಸೋಮವಾರರಂದು ರಾಣಾಪ್ರತಾಪ್ ವೃತ್ತದಿಂದ ನಗರಸಭೆಗೆ ಬೃಹತ್ ರ‍್ಯಾಲಿ ಮಾಡಲಿದ್ದಾರೆಂದು ಎ.ಐ.ಸಿ.ಸಿ.ಟಿ.ಯು. ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ  ತಿಳಿಸಿದ್ದಾರೆ.
ಆಶ್ರಯ ಸಮಿತಿ ಸ್ವಾಧೀನದಲ್ಲಿರುವ ೫೫೪ ನಿವೇಶನಗಳಲ್ಲಿ ಕನಿಷ್ಠ ಒಂದು ನಿವೇಶನದವಾದರೂ ಕಾಲುವೆಬದಿಯಲ್ಲಿ, ರಸ್ತೆ ಬದಿಯಲ್ಲಿ ಮತ್ತು ಸರಕಾರಿ ಜಾಗಗಳಲ್ಲಿ ಪಶುಗಳಿಗಿಂತಲೂ ಹೀನವಾಗಿ ಜೀವನ ಮಾಡುತ್ತಿರುವ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡದೇ ಇರುವುದು ಶಾಸಕರ ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದಿದ್ದಾರೆ. 
ಶಾಸಕರು ಆಶ್ರಯ ಸಮಿತಿಯ ಪಟ್ಟಿಯನ್ನು ಹಿಂದಕ್ಕೆ ಪಡೆದು, ನಿಜವಾಗಿ ಅವಶ್ಯಕತೆ ಇರುವ ಅಸಂಘಟಿತ ಕಾರ್ಮಿಕರಿಗೆ ಇರುವ ನಿವೇಶನಗಳಲ್ಲಿ ಅರ್ಧದಷ್ಟು ಹಂಚಬೇಕೆಂದು ಎ.ಐ.ಸಿ.ಸಿ.ಟಿ.ಯು. ಒತ್ತಾಯಿಸುತ್ತದೆ. ಇಲ್ಲದಿದ್ದಲ್ಲಿ ಸಂಘಟನೆ ಮುಂದಿನ ದಿನಗಳಲ್ಲಿ ಉಗ್ರ ರೂಪದ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಎ.ಐ.ಸಿ.ಸಿ.ಟಿ.ಯು. ಕಾರ್ಮಿಕ ಸಂಘಟನೆ  ತಿಳಿಸಿದೆ.
Please follow and like us:
error

Leave a Reply

error: Content is protected !!