ನಾಳೆ ಅಮವಾಸ್ಯೆಯಂದು ಮತ್ತೊಂದು ಜಾತ್ರೆ ನೆನಪಿಸುವಷ್ಟು ಭಕ್ತಜನರ ಸಂಗಮ

 ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ನಾಳೆ ದಿನಾಂಕ ೨೦-೦೧-೨೦೧೫ ರಂದು ಮಂಗಳವಾರದ ಅವರಾತ್ರಿ ಅಮವಾಸ್ಯೆಯ ದಿನ ಗವಿಮಠದಲ್ಲಿ  ಲಕ್ಷಗಟ್ಟಲೇ ಜನರು ಸೇರುತ್ತಾರೆ. ಬೆಳಿಗ್ಗೆಯಿಂದ ವಿವಿಧ ಗ್ರಾಮಗಳಿಂದ  ಹಾಗೂ ನಗರಗಳಿಂದ ಆಗಮಿಸಿದ ಭಕ್ತರು ಗವಿಮಠಕ್ಕೆ ಆಗಮಿಸಿ ಕರ್ತೃ ಗದ್ದೂಗೆಯ ದರ್ಶನ ಪಡೆದು ಕಾಯಿಕರ್ಪೂರ ಸಲ್ಲಿಸಿ ಭಕ್ತಿ ಭಾವ ಮೆರೆದು ಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ದರ್ಶನಾಶಿರ್ವಾದ ಪಡೆಯುವ ಭಕ್ತಜನಸ್ತೋಮ  ನಾಳೆ  ಗವಿಮಠದಲ್ಲಿ ಕಂಡು ಬರುತ್ರದೆ.ಇದರಿಂದಾಗಿ   ಶ್ರೀಗವಿಮಠ ಹಾಗೂ ಜಾತ್ರಾ ಆವರಣದ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಭಕ್ತರ ಮಹಾಪೂರವೇ  ಹರಿದು ಮತ್ತೊಂದು ಜಾತ್ರೆನ್ನು ನೆನಪಿಸುವ ವಾತವಾರಣ ನಾಳೆ ಕಂಡುಬರುತ್ತದೆ.
ಅಮವಾಸ್ಯೆಯಂದು ಭಕ್ತರಿಗೆ ಗೋಧಿ ಹುಗ್ಗಿ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಜರುಗುತ್ತಿರುವ ಮಹಾದಾಸೋಹದಲ್ಲಿ ಮಂಗಳವಾರ ಅವರಾತ್ರಿ ಅಮವಾಸ್ಯೆಯ  ದಿನ ಭಕ್ತರಿಗೆ ವಿಶೇಷವಾಗಿ ಗೋಧಿ ಹುಗ್ಗಿ,  ಬದನೆಪಲ್ಲೆ, ಹಿಟ್ಟಿನ ಜುನುಕಾ, ಅನ್ನ, ಸಾಂಬಾರ, ಉಪ್ಪಿನಕಾಯಿ ಚಟ್ನಿ, ಕಡ್ಲಿಚಟ್ನಿ, ನಿಂಬೆಕಾಯಿ ಚಟ್ನಿ ಈ ಮೊದಲಾದ ಭಕ್ಷ್ಯ ಭೋಜನಗಳು ಭಕ್ತಾಧಿಗಳಿಗೆ ದೊರೆಯುತ್ತವೆ ಎಂದು ಆಹಾರ ಸಮಿತಿಯ ರಾಮನಗೌಡರು ತಿಳಿಸಿದ್ದಾರೆ.

Leave a Reply