ರಸ್ತೆ ಅಗಲೀಕರಣಕ್ಕೆ ಮೊದಲು ಪರಿಹಾರ ನೀಡಿ

ರಸ್ತೆ ಅಗಲೀಕರಣಕ್ಕೆ ಮೊದಲು ಪರಿಹಾರ ನೀಡಿ ಕೊಪ್ಪಳ : ಕೊಪ್ಪಳದಲ್ಲಿ ಹಾದು ಹೋಗಿರುವ ಹೆದ್ದಾರಿ ಅಗಲೀಕರಣಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಅಗಲೀಕರಣ ಮಾಡುವಾಗ ತಮ್ಮ ಆಸ್ತಿಗಳನ್ನು ಕಳೆದುಕೊಳ್ಳುವ ಮಾಲಿಕರಿಗೆ ಪರಿಹಾರ ನೀಡಿ ಎಂದು ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಅಗಲೀಕರಣ ಮಾಡುತ್ತೇವೆ ಕಟ್ಟಡಗಳನ್ನು ಒಡೆಯುತ್ತೇವೆ ಎನ್ನುತ್ತಿದ್ದಾರೆ ಇದರಿಂದ ಮಾಲಿಕರಿಗೆ ತುಂಬಾ ಹಾನಿ ಯುಂಟಾಗುತ್ತದೆ. ಪರಿಹಾರ ನೀಡದೆ ಅಗಲೀಕರಣಕ್ಕೆ ಮುಂದಾದರೆ ಕಾನೂನು ಪ್ರಕಾರ ನಾವೂ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಹಿಂದಿನ ರಸ್ತೆಗಳೆಲ್ಲ 30 ಅಡಿ ಇದ್ದವು ಈಗ 150 ಅಡಿ ಮಾಡಬೇಕೆನ್ನುತ್ತಾರೆ. ಅಗಲೀಕರಣ ಮಾಡುವ ಮುಂಚೆ ಕಾನೂನಿನಂತೆ ಜಿಲ್ಲಾಧಿಕಾರಿಗಳು ನಡೆದುಕೊಳ್ಳಲಿ , ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡ ಲಿ ಎಂದು ಅವರು ಆಗ್ರಹಿಸಿದ್ದಾರೆ.

Please follow and like us:
error

Related posts

Leave a Comment