You are here
Home > Koppal News > ಡಿ.೩೦ ರಂದು ಯಲಬುರ್ಗಾ ತಾಲೂಕ ಮಟ್ಟದ ಯುವಜನ ಮೇಳ

ಡಿ.೩೦ ರಂದು ಯಲಬುರ್ಗಾ ತಾಲೂಕ ಮಟ್ಟದ ಯುವಜನ ಮೇಳ

ಕೊಪ್ಪಳ ಡಿ.೨೮  : ಜಿಲ್ಲಾ ಪಂಚಾಯತ್ ಕೊಪ್ಪಳ, ತಾಲೂಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಯಲಬುರ್ಗಾ, ತಾ.ಪಂ.ಯಲಬುರ್ಗಾ, ಗ್ರಾ.ಪಂ.ಕರಮುಡಿ ಹಾಗೂ ಕರ್ನಾಟಕ ಯುವಕ ಮಂಡಳ ಕರಮುಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿ.೩೧ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಮುಡಿ ಗ್ರಾಮದಲ್ಲಿ ಯಲಬುರ್ಗಾ ತಾಲೂಕ ಮಟ್ಟದ ಯುವಜನ ಮೇಳ ಕಾರ್ಯಕ್ರಮ ಜರುಗಲಿದೆ.
ದಿವ್ಯ ಸಾನಿಧ್ಯವನ್ನು ಯಲಬುರ್ಗಾ ಶ್ರೀ ೧೦೮ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರಮುರಡಿ ಹಿರೇಮಠ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. 
ಯುವಜನ ಮೇಳದ ಉದ್ಘಾಟನೆಯನ್ನು ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಅವರು ಜ್ಯೋತಿ ಬೆಳಗಿಸಲಿದ್ದಾರೆ. ಕರಮುಡಿ ಗ್ರಾ.ಪಂ.ಅಧ್ಯಕ್ಷೆ ಶಾರದಾ ಶರಣಪ್ಪ ಕುರಿ ಅವರು ವಹಿಸುವರು. 
ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಹೇಮಲತಾ ಅಂದಾನಗೌಡ ಪೋ|ಪಾ|, ರಾಮಣ್ಣ ಸಾಲಬಾವಿ, ಈರಪ್ಪ ಕುಡಗುಂಟಿ, ಉಮಾ ಶಿವಪ್ಪ ಮುತ್ತಾಳ, ಅಶೋಕ ತೋಟದ, ಅರವಿಂಧಗೌಡ ಶಿವಶರಣಪ್ಪಗೌಡ ಪಾಟೀಲ್, ತಾ.ಪಂ.ಅಧ್ಯಕ್ಷೆ ಲಕ್ಷ್ಮವ್ವ ಹಂಪಣ್ಣ ರಾಠೋಡ, ತಾ.ಪಂ.ಉಪಾಧ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ, ತಾ.ಪಂ.ಸದಸ್ಯ ಸಂಗಪ್ಪ ಎಸ್.ಬಂಡಿ, ತಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಫಕೀರಪ್ಪ ಹನಮಪ್ಪ ತಳವಾರ, ಗ್ರಾ.ಪಂ.ಉಪಾಧ್ಯಕ್ಷೆ ಯಲ್ಲಮ್ಮ ಹನಮಪ್ಪ ಪೂಜಾರ, ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಜಿ.ಟಿ.ಸೇವಾ ಸಂಸ್ಥೆಯ ಜಿ.ಟಿ.ಪಂಪಾಪತಿ, ತಹಶೀಲ್ದಾರ ದಿನೇಶ ಕುಮಾರ, ಸಿಪಿಐ ಜಿ.ಎಸ್.ನೆಲ್ಲೂರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ಜಿ.ಪಂ.ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೆಂಕಟೇಶ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಕೆ.ನಿಡಗುಂದಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಕುಂತಲಾದೇವಿ ವೀ.ಮಾಲೀಪಾಟೀಲ್, ಶಿಕ್ಷಣ ಪ್ರೇಮಿ ಡಾ.ಕೆ.ಕಾಶೀನಾಥ, ದಳಪತಿ ಶರಣಪ್ಪಗೌಡ ಪೋ.ಪಾಟೀಲ್, ಡಿ.ಎಸ್.ಎಸ್.ಅಧ್ಯಕ್ಷ ಮುದಕಪ್ಪ ಪೂಜಾರ, ಹಿರಿಯ ಕಲಾವಿದರಾದ ಶೇಖರಪ್ಪ ಮಾಸ್ತರ ಮಾನಶೇಟ್ಟಿ, ಡಾ|| ಕಾಸಯ್ಯ ನಂದಿಕೋಲ ಅವರು ಆಗಮಿಸಲಿದ್ದಾರೆ ಎಂದು ಯಲಬುರ್ಗಾ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಬಸವರಾಜ ಅಡಿವೆಪ್ಪ  ತಿಳಿಸಿದ್ದಾರೆ

Leave a Reply

Top