ಸ್ವಾಮಿ ವಿವೇಕಾನಂದರ ೧೫೨ನೇ ಜಯಂತಿ

 ಕೊಪ್ಪಳ ಸಮೀಪದ ಭಾಗ್ಯನಗರ ಗ್ರಾಮದ ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೨-೦೧-೨೦೧೪ (ಭಾನುವಾರ)ರಂದು ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ೧೫೨ನೇ ಜನ್ಮದಿನೋತ್ಸವ ಕಾರ್ಯಕ್ರಮ ಜರುಗಿತು.   
ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಚೈತನ್ಯಾನಂದ ಸ್ವಾಮೀಜಿ ಶ್ರೀ ರಾಮಕೃಷ್ಣ ಆಶ್ರಮ ಕೊಪ್ಪಳ ಇವರು ವಹಿಸಿದ್ದರು.  ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ ಭಾರತವನ್ನು ಪರಿಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ನಾವು ಇಡೀ ಭಾರತವನ್ನು ಸುತ್ತಿ ತಿಳಿದುಕೊಳ್ಳಬೇಕಾಗಿಲ್ಲ ಶ್ರೀ ಸ್ವಾಮಿ ವಿವೇಕಾನಂದರ ವಿದ್ಯುತ್ ವಾಣಿಯನ್ನು ಒಳಗೊಂಡಿರುವ ಜೀವನ ಚರಿತ್ರೆಯನ್ನು ಓದುಬೇಕು ಎಂದು ತಿಳಿಸಿಕೊಟ್ಟರು.  
ಮಕ್ಕಳಿಗೆ ಬೌದ್ಧಿಕ ಜ್ಞಾನ ಎಷ್ಟು ಅವಶ್ಯವೋ ಚಾರಿತ್ರ್ಯ ನಿರ್ಮಾಣವು ಅವಶ್ಯಕ ಅಂತಹ ಗುಣಗಳನ್ನು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿ ಅವುಗಳನ್ನು ಅಳವಡಿಸಿಕೊಳ್ಳವದು ಅಗತ್ಯ ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ಭಜನೆ ಕಾರ್ಯಕ್ರವವೋ ನಡೆಯಿತು.  ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ. ಕವಲೂರ, ಪ್ರಾಂಶುಪಾಲರಾದ ಪ್ರಶಾಂತ ಕುಲಕರ್ಣಿ ಹಾಗೂ ಶಿಕ್ಷಕ, ಸಿಬ್ಬಂದಿ ವರ್ಗ ಮತ್ತು ಪಾಲಕರು/ಪೋಷಕರು ಮಕ್ಕಳೊಂದಿಗೆ ಹಾಜರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕಲ್ಲಯ್ಯ ಹಿರೇಮಠ. ಸ್ವಾಗತವನ್ನು ಜ್ಯೋತಿ ಎಸ್.ಎಸ್. ವಂದನಾರ್ಪಣೆ ಹಾಗೂ ಸ್ವಾಮೀಜಿಗಳ ಕಿರು ಪರಿಚಯವನ್ನು ಶಿವರಾಜ ಏಣಿ ಸಹ ಶಿಕ್ಷಕರು ವಹಿಸಿಕೊಂಡಿದ್ದರು.

Leave a Reply