ಶೌಚಾಲಯ ನಿರ್ಮಾಣದ ಅಭಿಯಾನ ಅಳವಂಡಿ ಗ್ರಾಮದಿಂದ ಆರಂಭಿಸಿದ ಕೊಪ್ಪಳದ ನೂತನ ಸಿ.ಇ.ಒ.

ಕೊಪ್ಪಳ-16- ಶೌಚಾಲಯ ನಿರ್ಮಾಣ ಕ್ರಾಂತಿಯ ಮೂಲಕ ಇಡೀ ರಾಜ್ಯದ ಗಮನ ಸೆಳೆದಿರುವ ಕೊಪ್ಪಳ ಜಿಲ್ಲೇಯಲ್ಲಿ ಶೌಚಾಲಯ ನಿರ್ಮಾಣ ಅಭಿಯಾನ ಮತ್ತೇ ಮುಂದುವರೆದಿದೆ. ಈ ಹಿಂದೇ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಟಿ.ಜನಾರ್ದನ ಹುಲಿಗಿ ಸೀಟಿ ಹೊಡೆದು ಬಯಲು ಬಹಿರ್ದೆಸೆಗೆ ಹೋಗುವವರ ಕಾಲು ಮುಗಿದು, ಅಭಿಯಾನ ಆರಂಬಿಸಿದ್ದರು. ಈ ಮೂಲಕ ಜಿಲ್ಲೇಯಲ್ಲಿ ಒಂದು ಲಕ್ಷ ವೈಯಕ್ತಿಕ ಶೌಚಾಲಯ
ನಿರ್ಮಾಣಕ್ಕೆ ನಾಂದಿ ಹಾಡಿದ್ದರು. ಅದೇ ಪರಂಪರೆಯನ್ನು ಕೊಪ್ಪಳದ ನೂತನ
ಸಿ.ಇ.ಒ.ಆರ್.ರಾಮಚಂದ್ರನ್.ರವರು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಜೀವಿನಿ ಸ್ವ
ಸಹಾಯ ಸಂಘದ ಸದಸ್ಯರು ಹಾಗೂ  ಗ್ರಾ.ಪಂ.ಸದಸ್ಯರೊಟ್ಟಿಗೆ  ಬೆಳ್ಳಿಗ್ಗೆ ೬ರಿಂದಲೇ ಪ್ರತಿ
ಮನೆ ಮನೆಗೆ, ತೆರಳಿ ಕುಟುಂಬದ ಮುಖ್ಯಸ್ದರಲ್ಲಿ ಬಯಲು ಬಹಿರ್ದೆಸೆ ಹೋಗದಂತೆ ಕೈ  ಮುಗಿದು
ಮನವಿ ಮಾಡಿ ಕೊಳ್ಳುತ್ತಿದ್ದಾರೆ.
Please follow and like us:
error