ಪ್ರಜಾ ಪ್ರಭುತ್ವದ ಮಾದರಿಯಲ್ಲಿ ಗುಡ್ಲಾನೂರಿನ ಶಾಲಾ ಸಂಸತ್ತಿನ ರಚನೆ.

ಕೊಪ್ಪಳ- ತಾಲೂಕಿನ ಸ.ಹಿ.ಪ್ರಾ.ಶಾಲೆ ಗುಡ್ಲಾನೂರಲ್ಲಿ ಇತ್ತಿಚಗೆ ಶಾಲಾ ಸಂಸತ್ತಿನ ರಚನೆ ಚುಣಾವನೆಯ ಮೂಲಕ ನಡೆಯಿತು. ಗುರುವಾರದಂದು ಚುನಾವಣೆ ನಡೆದಿದ್ದು ಎಲ್ಲಾ ವಿಧ್ಯಾರ್ಥಿಗಳು ಆಸಕ್ತಿಯಿಂದ ಮತದಾನವನ್ನು ಮಾಡಿದರು ಶುಕ್ರವಾರದಂದು ಅಭ್ಯಾರ್ಥಿಯ ಎದುರಿನಲ್ಲಿ ಮತಗಳ ಎಣಿಕೆ ನಡೆಸಿ ೨೨ ಅಭ್ಯರ್ಥಿಗಳಲ್ಲಿ ೧೧ ಅಭ್ಯರ್ಥಿಗಳು ಶಾಲಾ ಸಂಸತ್ತಿಗೆ ಆಯ್ಕೆಯಾದರು.ಆಯ್ಕೆಯಾದ ವಿಧ್ಯಾರ್ಥಿಗಳು : ಅಮೃತ ಅಂಗಡಿ(ಪ್ರಧಾನ ಮಂತ್ರಿ), ವಿಜಯಲಕ್ಷ್ಮೀ(ಉಪ ಪ್ರಧಾನಿ), ಅಶ್ವಿನಿ ಕೆ.ಪಿ. (ಸಂಸ್ಕೃತಿಕ ಮಂತ್ರಿ) ಮಹೆಬೂಬು (ಶಿಕ್ಷಣ ಮಂತ್ರಿ) ಗವಿಸಿದ್ದಪ್ಪ (ಕ್ರೀಡಾ ಮಂತ್ರಿ) ಮೌನೇಶ (ಪ್ರವಾಸೋದ್ಯಮ ಮಂತ್ರಿ) ರಾಜಮಾ (ಆರೋಗ್ಯ ಮಂತ್ರಿ) ನೇತ್ರಾವತಿ (ಪರಿಸರ ಮಂತ್ರಿ) ಲಕ್ಷ್ಮೀ (ಹಣಕಾಸು ಮಂತ್ರಿ) ರವಿಚಂದ್ರ (ಶಾಲಾ ಉಸ್ತುವಾರಿ ಮಂತ್ರಿ) ಶ್ವೇತಾ (ಪುಟಾಣಿ ಮಂತ್ರಿ)ಯಾಗಿ ದಿನಾಂಕ: ೧೧-೦೭-೨೦೧೫ ರ ಶನಿವಾರದಂದು ಶಾಲಾ ಮುಖ್ಯೋಪಾಧ್ಯಯರಾದ ನಟರಾಜ ಹೆಚ್ ಮತ್ತು ಸಹಶಿಕ್ಷಕರುಗಳಾದ ಶಾರದ ಶಿರೂರು, ಅನ್ನಪೂರ್ಣದೇವಿ, ಮೇಣಸಪ್ಪ ವಿ, ಇಮ್ತಿಯಾಜ್ ಖಾನ್, ಮಂಜುನಾಥ ಗೋದಿ, ಮತ್ತು ಶಿಲ್ಪಾ ಗೌಡರ ಇವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಈ ಎಲ್ಲಾ ಚುಣಾವಣಾ ಉಸ್ತುವಾರಿಯನ್ನು ವಹಿಸಿದ್ದ ಸಹ ಶಿಕ್ಷಕರಾದ ಇಮ್ತಿಯಾಜ್ ಖಾನ್ ರವರು ಪ್ರಮಾಣ ವಚನವನ್ನು ಭೋದಿಸಿದರು.

Leave a Reply