fbpx

ಆಗಸ್ಟ್ ೭ ರಂದು ರಕ್ತದಾನ ಶಿಬಿರ.

ಕೊಪ್ಪಳ. ಜಿಲ್ಲೆಯ ಹನಮನಾಳ ಮತ್ತು ಮುಸಲಾಪೂರ ಗ್ರಾಮದಲ್ಲಿ ಆಗಸ್ಟ್ ೭ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ಹನಮನಾಳ – ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದಲ್ಲಿ ದಿ. ೭ ರಂದು ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ. ಮುಸಲಾಪೂರ – ಗಂಗಾವತಿ ತಾಲೂಕಿನ ಮುಸಲಾಪೂರ ಗ್ರಾಮದಲ್ಲಿ ದಿ. ೭ ರಂದು ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ. ಎಲ್ಲಾ ಶಿಬಿರಗಳಲ್ಲಿ ಆಸಕ್ತರು ರಕ್ತದಾನ ಮಾಡಿ ಸಹಕರಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.
Please follow and like us:
error

Leave a Reply

error: Content is protected !!