fbpx

ಕಿಲ್ಲೇದಾರ್‌ಗೆ ರಾಜ್ಯ ಪ್ರಶಸ್ತಿ ಅಭಿನಂದನೆ.

ಕೊಪ್ಪಳ, ನ.೧೭ (ಕ ವಾ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಮೆಹಬೂಬ್ ಎಲ್.ಕಿಲ್ಲೇದಾರ್ ಇವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಡಿ.ವಸಂತಪ್ರೇಮಾ ಅಭಿನಂದಿಸಿದ್ದಾರೆ.
      ಪ್ರತಿ ವರ್ಷವೂ ಇಲಾಖೆ ವತಿಯಿಂದ ರಾಜ್ಯದಲ್ಲಿ ಮಕ್ಕಳಿಗೆ ಸಂಬಂಧಿಸಿ

ದ ಸಂಘ, ಸಂಸ್ಥೆ, ವೈಯಕ್ತಿಕ, ಕಲೆ, ಸಾಂಸ್ಕೃತಿಕ ಸಂಗೀತ, ತಾರ್ಕಿಕ, ಕ್ರೀಡೆ, ನಾವಿನ್ಯತೆ, ಸಮಾಜಸೇವೆ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದಿರುವವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಮೆಹಬೂಬ್ ಎಲ್.ಕಿಲ್ಲೇದಾರ್ ಇವರು ಜಿಲ್ಲೆಯ ಮಕ್ಕಳಿಗೆ ಮೂಲ ಜಾನಪದ ಧಾಟಿಯ ಹಾಡುಗಳನ್ನು ಬಳಸಿಕೊಂಡು ಶಾಲೆಗಳಿಗೆ ತೆರಳಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿರುವುದನ್ನು ಗಮನಿಸಿ, ಸರ್ಕಾರವು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ, ನ.೧೪ ರಂದು ಜರುಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿಗೆ ಭಾಜನರಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವ ಮೆಹಬೂಬ್ ಎಲ್.ಕಿಲ್ಲೇದಾರ್ ಅವರ ಈ ಸಾಧನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಡಿ.ವಸಂತಪ್ರೇಮಾ ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error

Leave a Reply

error: Content is protected !!