ಜ. ೦೩ ರಂದು ಈಶಾನ್ಯದ ಐಸಿರಿ ಸರಣಿಯ ೧೬ ನೇ ಸಂಚಿಕೆ ಪ್ರಸಾರ.

ಕೊಪ್ಪಳ ಜ. ೦೨
(ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ,
ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ
ಸಂಗತಿಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ೧೬ ನೇ ಸಂಚಿಕೆ ಜ. ೦೩ ರಂದು
ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ
ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ
ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, ೧೬ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ
ಕಾರ್ಯಕ್ರಮದ ವಿವರಗಳು ಹೀಗಿವೆ.  ಸಂಸದ ಕಾಂಗ್ರೆಸ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ
ಖರ್ಗೆಯವರ ಅಭಿವೃದ್ದಿಯ ಕನಸುಗಳು. ಅಫಜಲಪೂರದ ಶಾಸಕ ಮಾಲಿಕಯ್ಯ ಗುತ್ತೇದಾರ ಅವರ
ಮತಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗಾಗಿ ಇರುವ ಯೋಚನೆಗಳು.  ಶಿಕ್ಷಣ ಇಲಾಖೆಯ ನಿವೃತ್ತ
ನಿರ್ದೇಶಕರಾಗಿರುವ ಎಂ.ಬಿ. ಪಾಟೀಲ ಅವರಿಂದ ವಿಮರ್ಶಾತ್ಮಕ ಆಲೋಚನೆಯ ಕೌಶಲವನ್ನು
ಬೆಳೆಸಿಕೊಳ್ಳುವ ಕುರಿತು ಸಲಹೆಗಳು.  ನಿವೃತ್ತ ನ್ಯಾಯ ಮೂರ್ತಿ ಎಂ.ಬಿ ಬಿರಾದರ ಅವರಿಂದ
ಸಂವಿಧಾನದ ಕುರಿತು ತಿಳುವಳಿಕೆ. ಕಲಬುರಗಿಯ ಅದ್ಭುತ ಚಿತ್ರ ಕಲಾವಿದ ಅಯಾಜುದ್ದೀನ ಪಟೇಲ
ಅವರ ಪರಿಚಯ.  ಪರಿಣಿತ ಮಹಿಳಾ ಗುಂಪಿನ ಸದಸ್ಯರಿಂದ ಬೇವಿನ ಮಹತ್ವ, ಅಕ್ಕಮಹಾದೇವಿಯ
ಜೀವನದ ಪರಿಚಯ, ಹೆಸರುಬೆಳೆ ಪಾಯಿಸ, ಪಲಾವ ತಯಾರಿಕೆ ಕುರಿತು ಟಿಪ್ಪಣಿಗಳು.   ಕಲಬುರಗಿಯ
ಕಲಾವಿದ ಸೂರ್ಯಕಾಂತ ಡುಮ್ಮಾ ಅವರಿಂದ ಭಾವಗೀತೆ.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ
ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ
ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್, ನುಡಿಮುತ್ತು
, ನಗೆಹನಿ ಮೂಡಿ ಬರಲಿವೆ.  ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ
ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ
ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.
Please follow and like us:
error