ಭಾರತೀಯ ನೌಕಾಪಡೆ: ಸೆ. ೧೮ ರಂದು ಕಾರವಾರದಲ್ಲಿ ನೇಮಕಾತಿ ರ‍್ಯಾಲಿ

 ಭಾರತೀಯ ನೌಕಾಪಡೆಯಲ್ಲಿ ಸೀನಿಯರ್ ಸೆಕೆಂಡರಿ ರಿಕ್ರೂಟ್ಸ್‌ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅವಿವಾಹಿತ ಪುರುಷ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಸೆಪ್ಟೆಂಬರ್ ೧೮ ರಂದು ಕಾರವಾರದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ.
ಈ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ೧೯೯೪ ಫೆಬ್ರವರಿ ೧ ರಿಂದ ೧೯೯೮ ರ ಜನೆವರಿ ೩೧ ರೊಳಗೆ ಜನಿಸಿರಬೇಕು. ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯುಳ್ಳವರಾಗಿದ್ದು, ಪಿಯುಸಿಯಲ್ಲಿ ಗಣಿತ, ಬೌತಶಾಸ್ತ್ರ, ರಾಸಾಯನಿಕಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ವಿಷಯಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿರಬೇಕು.
ಸ್ಕ್ರೀನಿಂಗ್ ಟೇಸ್ಟಗೆ ಹಾಜರಾಗಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳ ಮೂಲ ಪ್ರತಿಗಳು ಹಾಗೂ ಜೆರಾಕ್ಸ್ ಪ್ರತಿಗಳನ್ನು ಹಾಗೂ ತಹಶೀಲ್ದಾರರಿಂದ ದೃಡೀಕರಿಸಿದ ನಿವಾಸಿ ದೃಡೀಕರಣ ಪತ್ರ ಮತ್ತು ೮ ಪಾಸ್ಪೋರ್ಟ ಅಳತೆಯ ತಮ್ಮ ಬಾವಚಿತ್ರಗಳೊಂದಿಗೆ ಸೆಪ್ಟೆಂಬರ್ ೧೮ ರಂದು ಕಾರವಾರದ ಆರ್ಗ ಮೇನ್ ಗೇಟ್, ಐ.ಎನ್.ಎಸ್ ಕದಂಬ ನಾವೆಲ್ ಬೇಸ್ ನಲ್ಲಿ ನಡೆಯುವ ಸ್ಕ್ರೀನಿಂಗ್ ಟೆಸ್ಟನಲ್ಲಿ ಸಲ್ಲಿಸಬೇಕು.  ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕದಲ್ಲಿ  www.nausena-bharathi.nic.inಅಥವಾ ದೂರವಾಣಿ ಸಂಖ್ಯೆ: ೦೮೩೮೨-೨೩೧೨೫೨೧, ೨೩೧೨೫೧ ಇಲ್ಲಿ ಸಂಪರ್ಕಿಸಬಹುದಾಗಿದೆ .
Please follow and like us:
error