ಬಿಜೆಪಿಯು ವಿಶ್ವದ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ – ಶಿವರಾಮೇಗೌಡ

ದೇಶದಲ್ಲಿ ನಡೆಯುತ್ತಿರುವ ಸದsಸ್ಯತ್ವ ಅಭಿಯಾನದಲ್ಲಿ ೧೦ ಕೋಟಿ ಹೊಸಬರ ಸzಸ್ಯತ್ವದ ಗುರಿ ಹೊಂದಲಾಗಿದ್ದು  ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಹೊರಹೊಮ್ಮಲಿದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದರು.

ಅವರು ಇಂದು ರೈಲ್ವೇ ನಿಲ್ದಾಣ ಬಸ್ ನಿಲ್ದಾಣ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವದ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತ್ತ ತಂತ್ರಜ್ಞಾನ ಹಾಗು ಅಂತರ್ಜಾಲ ವ್ಯಾಪಕವಾಗಿ ಬಳಸಲ್ಪಡುವ ಮೊದಲ ಸದಸ್ಯತಾ ಅಭಿಯಾನದಲ್ಲಿ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಜೆಪಿಯ ಇ ಅವದಿಯ ಮೊದಲ ಸದಸ್ಯತ್ವ ಪಡೆಯುವ ಮೂಲಕ ಚಾಲನೆ ನೀಡಿದ್ದಾರೆ  ಪಕ್ಷದ ಸಂವಿಧಾನ ಪ್ರಕಾರ ೨೦೧೪-೧೫ರಲ್ಲಿ ಸದಸ್ಯತ ಅಭಿಯಾನವನ್ನು ಕೈಗೊಳ್ಳಬೇಕಾಗಿದೆ ಈ ಅಭಿಯಾನದಲ್ಲಿ  ಈ ಮೋದಲು ಸದಸ್ಯರಾಗಿದ್ದರೂ ಕೂಡ ಹೊಸದಾಗಿ ಸದಸ್ಯರಾಗಿ ತಮ್ಮ ಹೆಸರನ್ನು ನೊಂದಾಹಿಸಿ ಕೊಳ್ಳಬೇಕು ಸಂಘಟನೆಯ ಶಕ್ತಿಯನ್ನು ವೃದ್ದಿಸಿಕೊಂಡು ಪಕ್ಷದ ಸಂದೇಶವನ್ನು ಭೌಗೋಳಿಕವಾಗಿ  ಹಾಗೂ ಸಾಮಾಜಿಕವಾಗಿ ಸಮಾಜದ ಎಲ್ಲಾ ವರ್ಗಗಳತ್ತ ತಲಿಪಿಸುವ ಮೂಲಕ ಈ ಅಭಿಯಾನವನ್ನು ಯಸಶ್ವಿಗೊಳಿಸಬೇಕಾಗಿದೆ. ಭಾರತೀಯ ಜನತಾ ಪಕ್ಷವು ಆಂತರಿಕ ಪ್ರಜಾಪ್ರಭುತ್ವ  ಹೊಂದಿರುವ ಪಕ್ಷ ಪ್ರತಿ ಬಾರಿ  ಹೊಸ ಸದಸ್ಯರ ಸೆರ್ಪಡೆಯಿಂದ ಪಕ್ಷ ಗಟ್ಟಿಗೊಳ್ಳುತ್ತದೆ ಜೊತೆಗೆ ಹೊಸ ನಾಯಕತ್ವ ಲಭ್ಯವಾಗುತ್ತದೆ  ಈಗಾಗಲೆ ಆರಂಭವಾಗಿರುವ ಸದಸ್ಯತ್ವ ಅಭಿಯಾನವು ಡಿಸೆಂಬರ್ ೨ನೇ ವಾರದಲ್ಲಿ ನ್ಯಾಯಲಯಗಳಲ್ಲಿ ವಕೀಲರು ಹಾಗೂ ಇತರೆ ಸಿಬ್ಬಂದಿ ವರ್ಗ ಮೂರನೇ ವಾರದಲ್ಲಿ ಸಿನಿಮಾ ಮಂದಿರಗಳಲ್ಲಿ ಅಭಿಯಾನ ನಡೆಯಲಿದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದರು
ಇಂದು ನಡೆದ ಅಭಿಯಾನದಲ್ಲಿ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಜಿಲ್ಲಾ ಅಭಿಯಾನ ಸಂಚಾಲಕ ವಿರುಪಾಕ್ಷಪ್ಪ ಸಿಂಗನಾಳ, ನವೀನ್ ಈಶಣ್ಣ ಗುಳಗನ್ಣವರ, ತಿಪ್ಪೆರುದ್ರಸ್ವಾಮಿ, ಸಿದ್ದಲಿಂಗಯ್ಯ ಹಿರೇಮಠ, ಅಮರೇಶ ಕರಡಿ, ಗವಿಸಿದ್ದಪ್ಪ ಕಂದಾರಿ, ಮಂಜುನಾಥ ಅಂಗಡಿ, ದಶರಥ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಗರಾವ್, ಕುಲಕರ್ಣಿ ರಾಜು ಭಾಕಳೆ, ನೀಲಕಂಠಯ್ಯ ಹಿರೇಮಠ, ಮಹಾಂತೇಶ ಮೈನಳ್ಳಿ, ನವೋದಯ ವಿರುಪಣ್ಣ, ಗೀರಿಶ ಕಣವಿ, ಸಿದ್ದಪ್ಪವಾರದ, ವೀರಣ್ಣ ಸಂಕ್ಲಾಪುರ, ಗವಿಸಿದ್ದಪ್ಪ ಚಿನ್ನೂರು, ಬಸವರಾಜ ಭೋವಿ, ಗ್ರಾಮಾಂತರ ಅಧ್ಯಕ್ಷ ಡಾ|| ಕೋಟ್ರೇಶ ಸೆಡ್ಮಿ, ಪರಮಾನಂದ ಯಾಳಗಿ, ಬಸವರೆಡ್ಡಿ ಬೆಳವಿನಾಳ, ನಾಗರಾಜ ಚಿತ್ರಗಾರ, ವಿರುಪಾಕ್ಷಯ್ಯ ಗದಗಿನಮಠ, ಶಶಿಮಠಸ್ವಾಮಿ, ಖಾಜಿ ಅಬ್ದುಲ್ ರಶೀದ್ ಮಿಠಾಯಿ, ಎಂ.ಎಂ. ಮುಜಾವರ್, ಉಮೇಶ ಕುರಡೇಕರ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹೇಮಲತಾ ನಾಯಕ್, ಕಾರ್ಯದರ್ಶಿ ಮದುರಾ ಕಣಂ,ಶಾಮಾಲಾ ಕೊನಾಪೂರ,  ಶೋಬಾ ನಗರಿ, ಸರೋಜಾ ಭಾಕಳೆ, ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಬಾಗವಹಿಸಿದ್ದರು
ರೇಖಾ ಹನುಮಂತರೆಡ್ಡಿ ಇವರು ಮೊದಲ ಸದಸ್ಯತ್ವ ಪಡೆಯುವ ಮೂಲಕ ಅಭಿಯಾನವನ್ನು  ಉದ್ಗಾಟಿಸಲಾಹಿತು
Please follow and like us:
error

Related posts

Leave a Comment