fbpx

ಕೊಪ್ಪಳ ಜಿಲ್ಲಾ ಸಿಪಿಐ (ಎಂಎಲ್) ನ ೫ನೇ ಜಿಲ್ಲಾ ಸಮ್ಮೇಳನ

ಕೊಪ್ಪಳ ನಗರದ ಎಪಿಎಂಸಿ ಭವನದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯಲಿರುವ ಕೊಪ್ಪಳ ಜಿಲ್ಲಾ ಸಿಪಿಐ (ಎಂಎಲ್) ನ ೫ನೇ ಜಿಲ್ಲಾ ಸಮ್ಮೇಳನವು ಉದ್ಘಾಟನೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ಆರಂಭಗೊಂಡಿತು.
೫ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಕಾರ್ಯದರ್ಶಿ ಬಿ.ರುದ್ರಯ್ಯ ದೇಶವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒತ್ತಿ ಇಡಲಾಗಿದೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮನಮೋಹನ ಸಿಂಗ್ ಸರ್ಕಾರಕ್ಕಿಂತ ಭಿನ್ನವಾಗೇನು ಉಳಿದಿಲ್ಲಾ. ಎಡಿಎ – ಯುಪಿಎ ಶಕ್ತಿಗಳು ಒಂದೇ ನಾಣ್ಯದ ಎರಡು ಮುಖಗಳು. ರಾಷ್ಟ್ರವನ್ನು ಸಾಮ್ರಾಜ್ಯಶಾಹಿ – ಕಾರ್ಪೋರೇಟ್ ಸುಲಿಗೆಗೆ ಒಳಪಡಿಸುವಲ್ಲಿ ಒಂದಕ್ಕೊಂದು ಮುಂಚೂಣಿಯಲ್ಲಿವೆ. ದಲ್ಲಾಳಿ ಸರ್ಕಾರಗಳ ವಿರುದ್ಧ ಬಲಾಡ್ಯಾವಾಗಿ ತಿರುಗಿ ಬಿಳುವುದೆ ಇಂದಿನ ಅಗತ್ಯವಾಗಿದೆ ಎಂದರು. ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ದೇಶದಲ್ಲಿ ಕೋಮು ಭಾವನೆಯನ್ನು ಭಾರಿ ವ್ಯವಸ್ಥಿತವಾಗಿ ಬಿತ್ತರಿಸಲಾಗುತ್ತಿದೆ. ಅಷ್ಟೆ ಅಲ್ಲದೆ ಭ್ರ್ರಷ್ಟಾಚಾರವನ್ನು ಎಲ್ಲಡೆ ವ್ಯಾಪಿಸಲಾಗುತ್ತಿದೆ. ಜನತಾ ಹೊರಾಟಗಳಿಂದ ಕೋಮುವಾದ ಮತ್ತು  ಭ್ರಷ್ಟಾಚಾರವನ್ನು ಹಿಮ್ಮಟಿಸಲು ಸಾಧ್ಯವಿದೆ ಎಂದರು. 
ಕೇಂದ್ರ ಸಮಿತಿ ಸದಸ್ಯರಾದ ಡಿ ಎಚ್ ಪೂಜಾರ ಮಾತನಾಡಿ ಜನತಾ ಭಂಡಾಯ ಒಂದೇ ಜನತೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ. ಜನದ್ರೋಹಿ ದಲ್ಲಾಳಿ ವ್ಯವಸ್ಥೆ ವಿರುದ್ಧ ಜನತಾ ಹೋರಾಟಗಳನ್ನು ತಿವ್ರಗೋಳಿಸಲು ಮುಂದೆ ಬನ್ನಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. 
ರಾಜ್ಯ ಸಮಿತಿ ಸದಸ್ಯರಾದ ಚಿನ್ನಪ್ಪ ಕೊಟ್ರಿಕಿ ಯವರು ಮಾತನಾಡಿ ದುಡಿಯುವ ವರ್ಗದ ವರ್ಗ ಸಂಘರ್ಷವನ್ನು ತೀವ್ರಗೊಳಿಸೊಣ ಎಂದರು. ರಾಜ್ಯ ಸಮಿತಿಯ ಎಂ ಗಂಗಾಧರ ಮಾತನಾಡಿ ಜನತೆಯ ಹೋರಾಟಗಳಿಗೆ ಹೆಗಲೊಡ್ಡೋಣ ಎಂದರು. ಶರಣಯ್ಯ ಮುಳ್ಳೂರಮಠ ಮಾತನಾಡಿದರು, ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಗೋನಾಳ ಅಧ್ಯಕ್ಷತೆ ವಹಿಸಿದ್ದರು, ಹೇಮರಾಜ ವಿರಾಪೂರ ಕಾರ್ಯಕ್ರಮ ನಿರೂಪಿಸಿದರು, ಕೊಪ್ಪಳ, ಗಂಗಾವತಿ, ಕುಷ್ಟಗಿ ತಾಲೂಕಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು ಆರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಬಿ. ಗೋನಾಳ ಪಕ್ಷದ ಧ್ವಜಾರೋಹಣವನ್ನು ನೆರೆವೇರಿಸಿದರು, ಜನತೆಯ ಸಮಸ್ಯಗಳಿಗಾಗಿ ಹೋರಾಡಿ ಮಡಿದ ಹುತ್ತಾತ್ಮರ ಸ್ಥೂಪಾ ವಂಧನೆ ಕೈಗೊಳ್ಳಲಾಯಿತು, ಹಾಗೆಯೇ ಅಂತರಾಷ್ಟ್ರೀಯ ಕಮ್ಯೂನಿಷ್ಠ್ ಗೀತೆ ಮತ್ತು ಘೋಷಣೆಗಳು ಮೊಳಗಲ್ಪಟ್ಟವು, ಸಮ್ಮೇಳನದ ಉದ್ಘಾಟನೆಯ ನಂತರ ಪ್ರತಿನಿಧಿಗಳ ಅಧಿವೇಶನ ಮುಂದುವರೆಯಲ್ಪಟ್ಟಿತು. 
Please follow and like us:
error

Leave a Reply

error: Content is protected !!