ಶಾಂತಿಯ ವಾತಾವರಣ ಕದಡಬೇಡಿ- ಗವಿಶ್ರೀ

ಹಿಂದು ಎನ್ನುವದು ಸನಾತನ ಶಬ್ದ. ಜೈ ಹಿಂದ್ ಎಂದರೆ ಹಿಂದುವೊಂಕಿ ಜೈ ದೂಸರೊ ನಹಿಂ ಅಂತಲ್ಲ. ನಮ್ಮ ದೇಶ ವಿವಿಧ ದರ್ಮ,ಭಾಷೆಗಳ ಬೀಡು. ಧರ್ಮದ. ಆಳ ಅರಿತಾಗ ಚಿಂತನೆಯ ಆಳಕ್ಕಿಳಿದು ಹೋಗಬೇಕು.  ಸಂಕುಚಿತವಾಗಿ ನೋಡಿದರೆ ಎಲ್ಲವೂ  ಭಿನ್ನ.  ವಿಶಾಲವಾಗಿ ನೋಡಿದರೆ ಮಂದಿರ, ಮಸೀದಿ, ಚರ್ಚುಗಳು ಒಂದೇ. ಆಚರಣೆಯ ಧರ್ಮ, ದೇವರು ಬೇರೆಯಾದರೂ ಜಗಲಿಯ ಮೇಲಿಟ್ಟ ಬೆಳಕು  ಒಂದೇ.  ಎಲ್ಲರಿಗೂ  ಒಳಿತನ್ನು ಬಯಸುವದು ನಮ್ಮ ಸಂಸ್ಕೃತಿ. ಧರ್ಮ ಪ್ರೀತಿಸುವದನ್ನು ಕಲಿಸಲಿ ದ್ವೇಷ ಕಲಿಸುವದು ಬೇಡ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮೂರು. ಶಾಂತಿಯ ವಾತಾವರಣ. ಕೆಡಿಸುವ ಕೆಲಸ ಮಾಡಬೇಡಿ. ನಮ್ಮೂರ ತಿಳಿ ನೀರನ್ನು ಕದಡುವ ಅವಕಾಶ ಮಾಡಿಕೊಡುವದು ಬೇಡ. ಹಾಲು ಸಕ್ಕರೆಯಂತೆ ಒಂದಾಗಿ ಬೆರೆತು ಸಾಮರಸ್ಯದಿಂದ ಬಾಳಬೇಕು. ಸಾಮರಸ್ಯದ ತಿಳುವಳಿಕೆ  ಸಾಮಾನ್ಯ ಜನರಂತೆ ಕಲಿತ ಹಿಂದೂ ಮುಸ್ಲಿಂ ರಲ್ಲಿ ರಲಿ..
Please follow and like us:
error