ಮುದ್ದಾಬಳ್ಳಿ : ಎರಡು ದಿನಗಳ ಮಕ್ಕಳ ಕಾವ್ಯ ಕಮ್ಮಟ

 ಕೊಪ್ಪಳ: ತಾಲುಕಿನ ಮುದ್ದಾಬಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಬಾಲ ವಿಕಾಶ ಅಕಾಡೆವಿ ದಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂದೇಶ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕಿನ ಮಕ್ಕಳ ಕಾವ್ಯ ಕಮ್ಮಟದ ಉದ್ಘಾಟನ ಅಮಾರಂಭ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು  ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಉಪನಿರ್ದೆಶಕರಾದ ಶ್ರಿಮತಿ ವಸಂತ ಪ್ರೇಮ ಉದ್ಘಾಟಿಸಿ ಮಾತನಾಡುತ್ತಾ, ಬದುಕುವ ಹಕ್ಕು ವಿಕಾಶ ಹೊಂದುವ ಹಕ್ಕು, ಅಭಿವ್ಯಕ್ತಿ ಹಕ್ಕು, ಭಾಗ ವಹಿಸವ ಹಕ್ಕು, ಸಮಗ್ರ ಮಾಹಿತಿಯನ್ನು ತಿಳಿಸಿದರು. ಕವಿಯ ಕಲ್ಪನೆ ಮಕ್ಕಳನ್ನು ಕವನಗಳ ವಸ್ತು ವೈವಿಧ್ಯತೆ, ಜಾನಪದ ನಡೆದುಬಂದ ದಾರಿ, ಮಕ್ಕಲ ಕಾವ್ಯದ ಪ್ರಬೇದಗಳು ಕತನ ಕವನಗಳು, ಶಿಸು ಪ್ರಾಸಗಳು, ಚುಟುಕು, ಮಕ್ಕಳ ಕಾವ್ಯದ ಲಯ, ಚಂದಸ್ಸಿನ ವೈವಿದ್ಯತೆ ಒಗಟುಗಳು ವಚನಗಳ ವಸ್ತು ವೈವಿದ್ಯತೆ ಇತ್ಯಾದಿ ಕುರಿತು.  ಪ್ರತಿಭೆಗೆ ತಕ್ಕಂತೆ ಮಕ್ಕಳನ್ನು  ಪ್ರೋತ್ಸಾಹಿಸಬೇಕು ಎಂದರು. 
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಬಾಲ ವಿಕಾಸ ಅಕಾಡಮಿ  ಮಾಜಿ ಸದಸ್ಯ ಡಾ. ನಿಂಗು ಸೋಲಗಿ, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ, ಗ್ರಾ, ಪಂ ಉಪಾಧ್ಯಕ್ಷ ಗೋವಿಂದರೆಡ್ಡಿ ಮಾದಿನೂರ, ಹಾಗೂ ನಂದಯ್ಯ ಸಶಿಮಠ, ಶರಣಗೌಡ್, ಜಗದೀಶ ನಾಯ್ಕ, ಗೊಂಡಬಾಳ ಗ್ರಾ. ಪಂ ಅಧ್ಯಕ್ಷರಾದ ಸಿದ್ದಮ್ಮ, ರೇಖಾ ಕುಲಕರ್ಣಿ, ಕೆ.ಆರ್. ಹನ್ಮಂತಪ್ಪ, ನಾಗರತ್ನ ಕಾರಟಗಿ, ಶೋಭಾ ಜಿ, ಕವಿತಾ ಕಟ್ಟಿಮನಿ, ಕನಕಮ್ಮ ಸಂಪನ್ಮೂಲ ವ್ಯಕ್ತಿ, ಸಂದೇಶ ಸಂಸ್ಥೇಯ ನಿರ್ದೇಶಕ ಅರುಣಕುಮಾರ, ನೇತ್ರಾವತಿ, ಸ್ವಾಗತ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಂಪನ್ಯೂಲ ವ್ಯಕ್ತಿ ಎಸ್.ಐ.ಆರ್.ಡಿ ಮೈಸೂರ ಹೆಚ್. ಎಸ್. ಹೊನ್ನುಂಚಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾದ್ಯಾಯ ಚಂದ್ರಶೇಖರ ಹತ್ತಿಕಟಗಿ ಸ್ವಾಗತಿಸಿದರು. ವಿರೇಂದ್ರ ಪತ್ತಾರ ವಂದಿಸಿದರು. 

Leave a Reply