fbpx

ಹೆಚ್. ಆರ್. ಶ್ರೀನಾಥ ಸಂಸ್ಥಾನ ಮಠಕ್ಕೆ ಬೇಟಿ

ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್. ಆರ್. ಶ್ರೀನಾಥ ಅವರು ಮೊನ್ನೆ ತಮ್ಮ ೪೮ ನೇ ಹುಟ್ಟು ಹಬ್ಬ ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಮಠಕ್ಕೆ ಬೇಟಿಕೊಟ್ಟು ಸಂಸ್ಥಾನ ಮಠದ ಶ್ರೀ ಅಭಿನವ ಮಹಾಸ್ವಾಮಿಗಳ ಆಶಿರ್ವಾದ ಪಡೆದು ಕೊಂಡರು. ಈ ಸಂಧರ್ಬದಲ್ಲಿ ಸ್ವಾಮಿಗಳು ಮಾಜಿ ಸಂಸದ ಶ್ರೀ ಎಚ್.ಜಿ.ರಾಮುಲು ಅವರ ರಾಜಕೀಯ ಜೀವನದ ಬಗ್ಗೆ ಪ್ರಸ್ಥಾಪಿಸುತ್ತಾ, ಯಾವ ರೀತಿ ಅವರು ಹೈದ್ರಾಬಾದ ಕರ್ನಾಟಕ ಭಾಗವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು, ಈ ಭಾಗವನ್ನು ಕಾಂಗ್ರೆಸ ಪಕ್ಷದ ಭದ್ರಕೊಟೆ ಮಾಡಿದ್ದರು, ಅಲ್ಲದೆ ಅವರ ವರ್ಚಸ್ಸು ಹಾಗೂ ಅವರು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜೊತೆ ಇಟ್ಟು ಕೊಂಡಿದ್ದ ನಿಕಟ ಸಂಪರ್ಕ. ಹಾಗೂ ಅವರು ಮಠಕ್ಕೆ ಸಲ್ಲಿಸುತ್ತಿರುವ ಸೇವೆಗಳ ಬಗ್ಗೆ ಪ್ರಸ್ತಾಪಿಸಿ. ನೀವು ಕೂಡಾ ಅದೆರೀತಿ ರಾಜಕೀಯವಾಗಿ ಮುಂದೆ ಬರಬೇಕೆಂದು ಹುಟ್ಟು ಹಬ್ಬದ ಶುಭ ಹಾರೈಕೆಯೊಂದಿಗೆ ಆಶಿರ್ವಾದ ನೀಡಿದರು. 
ಈ ಸಂಧರ್ಬದಲ್ಲಿ ಅವರ ಜೊತೆ ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ, ಕೆ.ಪಿ.ಸಿ.ಸಿ ಇತರೆ ಹಿಂದುಳಿದ ವಿಭಾಗದ ಕಾರ್ಯಕಾರಿ ಸದಸ್ಯ ಅರ್ಜುನಸಾ, ನಗರಸಭಾ ಸದಸ್ಯ ಜಾಕಿರ ಹುಸೇನ ಕಿಲ್ಲೆದಾರ. ಅಲ್ಲದೆ ವ್ಹಿ.ಎಸ್. ಮಳ್ಳಿಮಠಸ್ವಾಮಿಗಳು, ಅನುಸಮ್ಮಾ ವಾಲ್ಮಿಕಿ ವೈಜನಾಥ ದಿವಟರ್, ನಾಗರಾಜ್ ಬಳ್ಳಾರಿ, ಡಸ್, ಬಿ. ಮಾಲಿಪಾಟೀಲ ಕರಿಮುದ್ದೀನ್ ಕಿಲ್ಲೆದಾರ ಮನೀರ ಸಿದ್ದಿಖಿ, ಹಾಗೂ ಸಾಕಷ್ಟು ಅಭಿಮಾನಿಗಳು ಶುಭ ಹಾರೈಸಿದರು.  
Please follow and like us:
error

Leave a Reply

error: Content is protected !!