ಅಂದಪ್ಪ ಮರೇಬಾಳಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ

ಕೊಪ್ಪಳ : ಆ, ೨೧ ಎಲ್ಲರಿಗೆ ಚಿರಪರಿಚಿತ ಮತ್ತು ಜನಸಾಮನ್ಯರೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾಮಾಜಿಕ ಸೇವೆ ಮತ್ತು ರಾಜಕೀಯ ಸೇವೆಗುನ್ನು ಕಳೆದ ಹಲವು ವರ್ಷಗಳಿಂದಸೇವೆ ಸಲ್ಲಿಸುತ್ತಾ ಬಂದಿರುವ ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಅಂದಪ್ಪ ಮರೇಬಾಳರವರಿಗೆ ಡಾ|| ಸಿದ್ದಯ್ಯ  ಪುರಾಣಿಕ್ ಸ್ಮಾರಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 
ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ದಿ.೨೫ ರವಿವಾರ ಸಂಜೆ ಜರುಗಲಿರುವ ಸಾಂಸ್ಕೃತಿಕ ಸಮ್ಮೇಳನದಲ್ಲಿ ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಅಂದಪ್ಪ ಮರೇಬಾಳರವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು  ಪ್ರಧಾನ ಮಾಡಲಾಗುವುದೆಂದು  ಕಾರ್ಯಕ್ರಮ ಸಂಘಟಕ  ಮಹೇಶಬಾಬು ಸುರ್ವೆ   ತಿಳಿಸಿದ್ದಾರೆ. 
ಅಭಿನಂದನೆ : ಅಂದಪ್ಪ ಮರೇಬಾಳ ರವರು ಪ್ರಶಸ್ಥಿಗೆ ಆಯ್ಕೆಯಾಗಿರುವುದಕ್ಕೆ  ನಗರಸಭೆಯ ಜೆ.ಡಿ.ಎಸ್. ಸದಸ್ಯರಾದ ಖಾಜಾವಲಿ ಬನ್ನಿಕೊಪ್ಪ, ಮೀನಾಕ್ಷಮ್ಮ ಬನ್ನಿಕೊಪ್ಪ, ಮತ್ತು ಜೆ.ಡಿ.ಎಸ್. ನಗರ ಯುವ ಘಟಕದ ಅದ್ಯಕ್ಷ ಸೈಯದ್ ಮಹೆಮುದ ಹುಸೇನಿ ಸೇರಿದಂತೆ ಹಲವಾರು ಜನ ಅಭಿನಂದಿಸಿದ್ದಾರೆ.  
Please follow and like us:
error

Related posts

Leave a Comment