ಮೌನೇಶ ವಡ್ಡಟ್ಟಿ, ಸುರೇಶ ದೇಸಾಯಿಗೆ ಕೊಪ್ಪಳ ಐಸಿರಿ ಪ್ರಶಸ್ತಿ

ಕೊಪ್ಪಳ   ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂ

ಡ ಜಿ.ಸುರೇಶ್ ದೇಸಾಯಿ ಅವರನ್ನು ಕೊಪ್ಪಳ ಐಸಿರಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಆಯ್ಕೆ ಮಾಡಿದೆ.

ನಗರದ ಸಾಹಿತ್ಯ ಭವನದಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವದ ಸಮಾರೂಪ ಸಮಾರಂಭದಲ್ಲಿ ದಿ.೨೬ ರ ಸೋಮವಾರ ಸಂಜೆ ಜರುಗುವ ಸಾಂಸ್ಕೃತಿಕ ಸಮಾರಂಭದಲ್ಲ ಸುರೇಶ ದೇಸಾಯಿ ಅವರನ್ನು ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.  ಜನಸಾಮಾನ್ಯರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸಿ ಜನರ ಸಮಸ್ಯೆಗಳಿಗೆ ನೇರ ಸ್ಪಂದನೆ ಮಾಡುವುದರ ಮೂಲಕ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಇವರ ಉತ್ತಮ ಸೇವೆ ಪರಿಗಣಸಿ ಇವರಿಗೆ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಕೊಡ ಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉತ್ಸವದ ಸಂಘಟಕ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ಮಹೇಶ ಬಾಬು ಸುರ್ವೆ   ತಿಳಿಸಿದ್ದಾರೆ.

Leave a Reply