fbpx

ಕೊಪ್ಪಳ: ನಗರದ ೧೮ ನೇ ವಾರ್ಡಿನಲ್ಲಿ ಕಾಂಗ್ರೆಸ್‌ನ ಬಿರುಸಿನ ಪ್ರಚಾರ

 ನಗರದ ೧೮ ನೇ ವಾರ್ಡಿನಲ್ಲಿಂದು ಕಾಂಗ್ರೆಸ್ ಯುವ ಮುಖಂಡ ವೈಜನಾಥ ದಿವಟರ್ ಹಾಗೂ ಎಪಿಎಂಸಿ ಅಧ್ಯಕ್ಷ  ಗವಿಸಿದ್ದಪ್ಪ ಮುದಗಲ್ ರವರ ನೇತೃತ್ವದಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು. 
ಕಾಂಗ್ರೆಸ್‌ನ ಸಿದ್ಧರಾಮಯ್ಯ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕೇವಲ ೯ ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಅಲ್ಲದೇ ಕೇಂದ್ರ ಸರಕಾರದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ನೀಡುವ ಮೂಲಕ ಈ ಭಾಗದ ಜನತೆ ಅನುಕೂಲ ಕಲ್ಪಿಸಿದ್ದು ಜನತೆ ಇದನ್ನು ಮರೆತಿಲ್ಲ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸ್ಥಳೀಯ ಶಾಸಕರಾದ ರಾಘವೇಂದ್ರ ಹಿಟ್ನಾಳ ಯುವ ನೇತಾರರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದು ಜನತೆ ಕಾಂಗ್ರೆಸ್ ಕೈಬಿಡಲಾರರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ರಮೇಶ ಉಮಚಗಿ, ಪ್ರಶಾಂತ ರಾಯ್ಕರ್, ಅಫ್ಜಲ್ ಪಟೇಲ್, ಬುಡನಸಾಬ ರೇವಡಿ, ಮರ್ದಾನಸಾಬ ದಫೇದಾರ್, ಮೈನುದ್ದೀನ್‌ಸಾಬ ದಪೇದಾರ್, ಇಮಾಮ್ ಹುಸೇನ್ ಓಣಿಯ ಪ್ರಮುಖ ಹಿರಿಯರು ಪಕ್ಷದ ಕಾರ್ಯಕರ್ತರು ೧೮ ನೇ ವಾರ್ಡಿನ ಸಮಸ್ತ ಗುರುಹಿರಿಯರು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದರು.
Please follow and like us:
error

Leave a Reply

error: Content is protected !!