ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿ :

 ಡಿಡಿ ಮೂಲಕ ಹಣ ಪಡೆಯಲು ಸೂಚನೆ 
 ಕಳೆದ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲಾದ ಈರುಳ್ಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ರೈತರಿಗೆ ಡಿ.ಡಿ. ಮೂಲಕ ಹಣ ಪಾವತಿಸಲಾಗುತ್ತಿದ್ದು, ಸಂಬಂಧಪಟ್ಟ ರೈತರು ಕೊಪ್ಪಳ ಟಿಎಪಿಸಿಎಂಎಸ್ ನಿಂದ ಡಿಡಿ ಪಡೆಯಲು ಸೂಚನೆ ನೀಡಲಾಗಿದೆ.
  ೨೦೧೧-೧೨ರ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಈರುಳ್ಳಿ ಖರೀದಿಸಲಾಗಿತ್ತು.  ಸಂಬಂಧಪಟ್ಟ ರೈತರಿಗೆ ಹಣವನ್ನು ಹಂತ ಹಂತವಾಗಿ ಜಿಲ್ಲಾಡಳಿತ ರೈತರ ಹೆಸರಿನಲ್ಲಿಯೇ ಕೊಪ್ಪಳದ ಎಸ್‌ಬಿ ಹೆಚ್. ಖಜಾನೆ ಶಾಖೆಯ ಖಾತೆಯಿಂದ ಡಿಡಿ ನೀಡುವ ವ್ಯವಸ್ಥೆ ಮಾಡಿ, ಡಿಡಿ ಗಳನ್ನು ಕೊಪ್ಪಳ ಟಿಎಪಿಸಿಎಂಎಸ್ ನಲ್ಲಿ ವಿತರಿಸಲಾಗುತ್ತಿದೆ.  
  ೧ ನೇ ಹಂತ, ೨ ನೇ ಹಂತ ಹಾಗೂ ೩ ನೇ ಹಂತದಲ್ಲಿ ಹಣ ಬಿಡುಗಡೆ ಮಾಡಿದ್ದು, ಡಿಡಿ ರೂಪದಲ್ಲಿ ಹಣವನ್ನು ಕಳೆದ ಎರಡ್ಮೂರು ತಿಂಗಳಿಂದ ಡಿಡಿ ವಿತರಿಸಲಾಗುತ್ತಿದೆ.  ಆದರೆ ಕೆಲ ರೈತರು ಡಿಡಿಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ. ಡಿಡಿ ತೆಗೆದುಕೊಂಡ ಹೋಗದೇ ಇರುವ ರೈತರ ವಿವರ ಇಂತಿದೆ.  ಚಿಲವಾಡಗಿ ಗ್ರಾಮದ ರೇಣುಕಮ್ಮ ಸುರೇಶಪ್ಪ ಉಪ್ಪಾರ, ನಿಂಗಪ್ಪ ಯಮನಪ್ಪ ಉಪ್ಪಾರ, ಸಂಗನಾಳ ಗ್ರಾಮದ ಶರಣವ್ವ ಕರಿಯಪ್ಪ ಕಟ್ಟೆಪ್ಪನವರ್, ದುರಗಮ್ಮ ದುರಗಪ್ಪ ಕಟ್ಟೆಪ್ಪನವರ್, ರಾಜೂರು ಗ್ರಾಮದ ಮುರ್ತುಜಸಾಬ ಇಮಾಮಸಾಬ, ಆಡೂರು ಗ್ರಾಮದ ದಂಡೆಪ್ಪ ಹುಚ್ಚಪ್ಪ ಅಂಗಡಿ ಹಾಗೂ ಮಾಳೆಕೊಪ್ಪ ಗ್ರಾಮದ ಪ್ರಕಾಶ ಬಸಪ್ಪ ಹಂದ್ರಾಳ.  ಈ ಡಿಡಿ ಗಳ ಮೇ. ೨೫ಕ್ಕೆ ಅಂತ್ಯಗೊಳ್ಳುವುದರಿಂದ, ಸಂಬಂಧಪಟ್ಟ ರೈತರು ಕೂಡಲೆ ಈರುಳ್ಳಿ ಖರೀದಿಸಿದ ಬಗೆಗಿನ ರಸೀದಿ (ಮೂಲ ಪ್ರತಿ), ಮತದಾರರ ಭಾವಚಿತ್ರವಿರುವ ಗುರುತಿನ ಕಾರ್ಡ್‌ನೊಂದಿಗೆ ಸಂಬಂಧಪಟ್ಟ ರೈತರೇ ಖುದ್ದಾಗಿ ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿರುವ ಟಿಎಪಿಸಿಎಂಎಸ್ ಕಾರ್ಯಾಲಯದಿಂದ ಪಡೆದುಕೊಂಡು ಹೋಗುವಂತೆ ತಾಲೂಕು ಹುಟ್ಟುವಳಿ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕರು  ತಿಳಿಸಿದ್ದಾರೆ.
Please follow and like us:
error