ವಕ್ಫ ಇಲಾಖೆಯಿಂದ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ

  ಕರ್ನಾಟಕ ರಾಜ್ಯ ಔಕಾಫ್ ಆಫ್ ಉಮೆನ ಡೆವಲಪಮೆಂಟ್, ಮೈನರ್‌ಟಿ ವೆಲ್ಫೇರ್ ಹಜ್ಜ್ ಮತ್ತು ವಕ್ಫ್ ಇಲಾಖೆ ಬೆಂಗಳೂರು ಇವರಿಂದ ಪ್ರಸಕ್ತ ಸಾಲಿಗೆ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಂಬಿಬಿಎಸ್, ಬಿಡಿಎಸ್, ಬಿಇ, ಬಿಯುಎಂಎಸ್, ಬಿಎಎಂಎಸ್, ಬಿಹೆಚ್‌ಎಂಎಸ್, ಎಂಬಿಎ, ಎಂಸಿಎ, ಎಂಡಿ, ಎಂಡಿಎಸ್, ಎಂಇ, ಎಂಟೆಕ್, ಬಿಸಿಎ, ಬಿಬಿಎಂ, ಬಿಬಿಎ, ಬಿಎಸ್ಸಿ, ಬಿಎಸ್ಸಿ, ಬಿವಿಎಸ್‌ಸಿ, ನರ್ಸಿಂಗ್, ಬಿ.ಫಾರ್ಮ ಹಾಗೂ ಡಿ.ಫಾರ್ಮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಇಲಾಖೆಯ ವೆಬ್‌ಸೈಟ್ ರ ಮೂಲಕ ಪಡೆದು ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಡಿ.೧೪ ರೊಳಗಾಗಿ ಸಲ್ಲಿಸಬಹುದಾಗಿದೆ. ಎಲ್ಲಾ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ವಕ್ಫ ಸಲಹಾ ಸಮಿತಿಯ ಅಧ್ಯಕ್ಷರಾದ ಮುಸ್ತಫಾ ಕಮಾಲ್ ಪಾಷಾ  ತಿಳಿಸಿದ್ದಾರೆ.

Leave a Reply