ನೂತನ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮುಖ್ಯಾಧಿಕಾರಿಗಳ ನೇಮಕ.

ಕೊಪ್ಪಳ, ಸೆ.೨೨
(ಕ ವಾ)  ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಗ್ರಾ.ಪಂ. ಗಳನ್ನು
ಮೇಲ್ದರ್ಜೆಗೇರಿಸಲಾಗಿರುವ ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಿಗೆ ಪ್ರಭಾರಿ
ಮುಖ್ಯಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಗಳು  ಆದೇಶ ಹೊರಡಿಸಿದ್ದಾರೆ.
    
ಸರ್ಕಾರದ ಆದೇಶದಂತೆ ಮೇಲ್ದರ್ಜೆಗೇರಿಸಲಾಗಿರುವ ಕಾರಟಗಿ ಪುರಸಭೆಗೆ ಪ್ರಭಾರಿ
ಮುಖ್ಯಾಧಿಕಾರಿಯನ್ನಾಗಿ ಗಂಗಾವತಿ ನಗರಸಭೆ ಸಮುದಾಯ ಸಂಘಟನಾಧಿಕಾರಿ ಎನ್. ಶಿವಲಿಂಗಪ್ಪ
ಅವರನ್ನು ನೇಮಿಸಿದೆ. ಕನಕಗಿರಿ ಪಟ್ಟಣ ಪಂಚಾಯಿತಿಗೆ ಪ್ರಭಾರಿ ಮುಖ್ಯಾಧಿಕಾರಿಯನ್ನಾಗಿ
ಕೊಪ್ಪಳ ನಗರಸಭೆ ಕಂದಾಯ ಅಧಿಕಾರಿ ಶಂಕರಪ್ಪ ಬಂಡಿ. , ಕುಕನೂರು ಪಟ್ಟಣ ಪಂಚಾಯತಿ
ಪ್ರಭಾರಿ ಮುಖ್ಯಾಧಿಕಾರಿಯನ್ನಾಗಿ ಕೊಪ್ಪಳ ನಗರಸಭೆಯ ವ್ಯವಸ್ಥಾಪಕ ಬಿ. ಬಾಬು. ತಾವರಗೇರಾ
ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯಾಧಿಕಾರಿಯನ್ನಾಗಿ ಗಂಗಾವತಿ ನಗರಸಭೆಯ ಕಂದಾಯ ಅಧಿಕಾರಿ
ಮೌಲಾಸಾಬ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply