ಕಲಾಗ್ರಾಮ ಕಿನ್ನಾಳದ ಅಭಿವೃದ್ಧಿಗಾಗಿ ಬರುವ ದಿನಗಳಲ್ಲಿ ಅನುದಾನ- ಶಾಸಕ ಇಕ್ಬಾಲ್ ಅನ್ಸಾರಿ

ಕೊಪ್ಪಳ: ಅಂತರ್ ರಾಷ್ಟ್ರೀಯ ಖ್ಯಾತಿಯ ಕಲಾಗ್ರಾಮ ಕಿನ್ನಾಳದ ಅಭಿವೃದ್ಧಿಗಾಗಿ ಬರುವ ದಿನಗಳಲ್ಲಿ ಅನುದಾನ ಬರಲಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಕಿನ್ನಾಳ ಗ್ರಾಮಕ್ಕೂ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
    ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯ ’ಸ್ವದೇಶಿ-ವಿದೇಶಿ ಪ್ರವಾಸಿಗರ ಮೂಲಭೂತ ಸೌಕರ್ಯಗಳ ಯೋಜನೆ’ಯಡಿ ಎರಡು ಕೋಟಿ ರೂಪಾಯಿ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
     ಗ್ರಾಮದ ದಲಿತರ ಕಾಲನಿಯಲ್ಲಿ ಸಿ ಸಿ ರಸ್ತೆ ನಿರ್ಮಾಣಕ್ಕೆ ೨೦೧೫-೧೬ ನೇ ಸಾಲಿನ ಹೆಚ್‌ಕೆಡಿಬಿ ಯೋಜನೆಯಡಿ ೧೦ ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ೩೦ ಲಕ್ಷ ವೆಚ್ಚದ ಶಾಲಾ ಕೊಠಡಿಗಳ ನಿರ್ಮಾಣ, ೨೭ ಲಕ್ಷ ವೆಚ್ಚದ ಬಜಾರ ರಸ್ತೆಯ ಡಾಂಬರೀಕರಣ, ೫ ಲಕ್ಷ ವೆಚ್ಚದಲ್ಲಿ ಕಟ್ಟಡ ಕಾರ್ಮಿಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.
    ಇದಕ್ಕೂ ಮುನ್ನ ೧ ಕೋಟಿ ವೆಚ್ಚದಲ್ಲಿ ಬುಡಶೆಟ್ನಾಳ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಇದೇ ಕೆರೆಯ ಇನ್ನಷ್ಟು ಅಭಿವೃದ್ಧಿಗಾಗಿ  ಇನ್ನೂ ೫ ಕೋಟಿ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.
     ಈ ಸಂದರ್ಭದಲ್ಲಿ ವಿಎಸ್‌ಎಸ್‌ಎಸ್‌ಎನ್ ಅಧ್ಯಕ್ಷ ವೀರೇಶ ತಾವರಗೇರಿ, ತಾ.ಪಂ. ಸದಸ್ಯ ಅಮರೇಶ ಉಪಲಾಪೂರ, ಜಿ.ಪಂ. ಮಾಜಿ ಸದಸ್ಯ ಪ್ರಸನ್ನ ಗಡಾದ, ಗ್ರಾ.ಪಂ. ಮಾಜಿ ಅಧ್ಯಕ್ಷ ವೀರಭದ್ರಪ್ಪ ಗಂಜಿ ಮಾತನಾಡಿದರು. ವೇದಿಕೆ ಮೇಲೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್ ಬಿ ಖಾದ್ರಿ, ತಾಲೂಕು ಜೆಡಿಎಸ್ ಅಧ್ಯಕ್ಷ ಯಮನಪ್ಪ ವಿಠಲಾಪುರ, ಬಾಷಾ ಹಿರೇಮನಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.
  ಪ್ರಾಸ್ತಾವಿಕವಾಗಿ ಜೆಡಿಎಸ್ ಮುಖಂಡ ಬಸವರಾಜ ಚಿಲವಾಡಗಿ ಮಾತನಾಡಿದರು. ಸುಭಾಸ್ ರಡ್ಡಿ ನಿರೂಪಿಸಿದರು. ಅನಿಲ್ ಬೋರಟ್ಟಿ ವಂದಿಸಿದರು. 

Leave a Reply