ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ ಅರ್ಜಿ ಆಹ್ವಾನ.

ಕೊಪ್ಪಳ, ಅ. ೦೫ (ಕ ವಾ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿಎಂಇಜಿಪಿ)ಯಡಿ ಅರ್ಜಿ ಆಹ್ವಾನಿಸಲಾಗಿದೆ.
     ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯನ್ನು ಪ್ರಸಕ್ತ ಸಾಲಿಗೆ ಮುಂದುವರೆಸಲಾಗಿದೆ.  ಈ ಯೋಜನೆಯಡಿ ಗರಿಷ್ಟ ಯೋಜನೆಯ ವೆಚ್ಚ ರೂ.೨೫ ಲಕ್ಷ ಇರುವ ತಯಾರಿಕಾ ಮತ್ತು ರೂ.೧೦ ಲಕ್ಷ ಇರುವ ಸೇವಾ ಚಟುವಟಿಕೆಗಳಿಗೆ ಬ್ಯಾಂಕುಗಳು ಒದಗಿಸುವ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.೧೫ ರಿಂದ ೨೫ ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ, ಅಂಗವಿಕಲ ಮಾಜಿ ಸೈನಿಕ, ಮಹಿಳೆ ರೀತಿಯ ವಿಶೇಷ ವರ್ಗದ ಫಲಾನುಭವಿಗಳಿಗೆ ಶೇಕಡಾ ೨೫ ರಿಂದ ೩೫ ರಷ್ಟು ಸಹಾಯಧನ ಸೌಲಭ್ಯ ಒದಗಿಸಲಾಗುವುದು. ಉದ್ದಿಮೆಯನ್ನು ಆರಂಭಿಸುವ ಸಾಮಾನ್ಯ ವರ್ಗದವರು ಯೋಜನೆಯ ವೆಚ್ಚದ ಶೇಕಡಾ.೧೦ ರಷ್ಟು ಮತ್ತು ವಿಶೇಷ ವರ್ಗದವರು ಶೇಕಡಾ ೫ ರಷ್ಟು ಸ್ವಂತ ಬಂಡವಾಳ ಹೂಡಬೇಕಾಗುತ್ತದೆ. ಈ ಯೋಜನೆಯು ಹೊಸ ಘಟಕಗಳಿಗೆ ಮಾತ್ರ ಲಭ್ಯವಿದೆ. ಯೋಜನಾ ವೆಚ್ಚ ರೂ. ೧೦ ಲಕ್ಷ ಮೇಲ್ಪಟ್ಟ ಘಟಕಗಳಿಗೆ ಅರ್ಜಿ ಸಲ್ಲಿಸಲಿಚ್ಛಿಸುವವರು ೮ನೇ ತರಗತಿ ಪಾಸಾಗಿರಬೇಕು. ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ, ಪದವಿ ಹೊಂದಿರಬೇಕು.
     ಆಸಕ್ತ ಅಭ್ಯರ್ಥಿಗಳು ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಕೊಪ್ಪಳ ಅಥವಾ ಜಿಲ್ಲಾ ಅಧಿಕಾರಿಗಳು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಕೊಪ್ಪಳ ಅಥವಾ ರಾಜ್ಯ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ವಿಜಿನಾಪುರ, ದೂರವಾಣಿನಗರ, ಬೆಂಗಳೂರು ಇವರ ಕಛೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ, ಅ.೨೬ ರೊಳಗಾಗಿ ಸಲ್ಲಿಸಬಹುದಾಗಿದೆ. ಅಲ್ಲದೆ, ನವೆಂಬರ್.೦೨ ರೊಳಗಾಗಿ ಇಲಾಖೆಯ ವೆಬ್‌ಸೈಟ್
www.kvic.org.in  &  www.pmegp.inಮೂಲಕವೂ ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ದೂರವಾಣಿ ಸಂಖ್ಯೆ : ೦೮೫೩೯-೨೩೧೫೪೮ ಅಥವಾ ಜಿಲ್ಲಾ ಅಧಿಕಾರಿಗಳು, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಕೊಪ್ಪಳ, ದೂರವಾಣಿ ಸಂಖ್ಯೆ: ೦೮೫೩೯-೨೩೧೪೭೩ ಅಥವಾ ರಾಜ್ಯ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ವಿಜಿನಾಪುರ, ದೂರವಾಣಿನಗರ, ಬೆಂಗಳೂರು, ದೂರವಾಣಿ ಸಂಖ್ಯೆ : ೦೮೦-೨೫೬೬೫೮೮೪ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.  
Please follow and like us:
error