ಮಗುವಿನ ವ್ಯಕ್ತಿತ್ವದ ವಿಕಸನದಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ – ನಿರ್ಭಯಾನಂದ ಸ್ವಾಮೀಜಿ


ಕೊಪ್ಪಳ : ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ, ಶಿವಾಜಿ ಇವರೆಲ್ಲರಿಗೂ ಅವರವರ ತಾಯಂದಿರು ಉತ್ತಮ ಬೋಧನೆ ಮಾಡಿದ್ದರಿಂದಲೆ ಅವರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುವಂತಾಯಿತು. ಅಂದರೆ ಮಗುವಿನ ವ್ಯಕ್ತಿತ್ವದ ವಿಕಸನದಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ ಎಂದು ಗದಗ-ಬಿಜಾಪೂರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.
    ಅವರು ಶುಕ್ರವಾರ ಭಾಗ್ಯನಗರದ ಪಾನಘಂಟಿ ಕಲ್ಯಾಣ  ಮಂಟಪದಲ್ಲಿ ಶ್ರೀ ಶಾರದಾ ಮಾತಾ ಆಧ್ಯಾತ್ಮಿಕ ಬಳಗದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
    ಶಾರದಾ ಮಾತೆಯ ಜೀವನ, ಸಂದೇಶದ ಅಧ್ಯಯನಗಳಿಂದಾಗಿ ಭಾರತೀಯ ಸ್ರ್ತೀಯರು ಎಲ್ಲಾ ರೀತಿಯಿಂದಲೂ ಆದರ್ಶವಾಗಿ ಬಾಳಲು ಅರ್ಹರಾಗಿರುತ್ತಾರೆ. ಶಾರದಾ ಮಾತೆಯವರು ಮಾತೃತ್ವದ ಶಕ್ತಿಯಾಗಿ ಪತ್ನಿಯ ಸ್ಥಾನದಲ್ಲಿ ಇದ್ದುಕೊಂಡು ಇಂದು ದೇವತೆಯಾಗಿ ಪೂಜ್ಯಗೊಳ್ಳುತ್ತಿದ್ದಾರೆ. ಶಾರದಾ ಮಾತಾ ಆಧ್ಯಾತ್ಮಿಕ ಬಳಗದ ಎಲ್ಲಾ ಪದಾಧಿಕಾರಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದರೆ ಮಾತ್ರ ಈ ಬಳಗದ ಉದ್ಘಾಟನೆಯಾದುದ್ದಕ್ಕೆ ಸಾರ್ಥಕವಾಗುತ್ತದೆ  ಎಂದರು.
    ಕೊಪ್ಪಳ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಚೈತನ್ಯಾನಂದ ಸ್ವಾಮೀಜಿ ಯವರು ವಿವೇಕಾನಂದರ ಗೀತೆಗಳನ್ನು ಹಾಡಿದರು. 
    ರಾಜ್ಯ ಕರಕುಶಲ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಲಲೀತಾರಾಣಿ ಶ್ರೀರಂಗದೇವರಾಯಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರಸಭೆಯ ಅಧ್ಯಕ್ಷರಾದ ಲತಾ ಸಂಡೂರು, ಹೊಸಪೆಟೆಯ ಕೆ.ಎಫ್.ಐ.ಎಲ್. ಲೇಡಿಸ್ ಕ್ಲಬ್ ಅಧ್ಯಕ್ಷರಾದ ಕಮಲಾ ಗುಮಸ್ತೆ, ವಕೀಲರಾದ ರಾಘವೇಂದ್ರ ಪಾನಘಂಟಿ, ಶಾರದಾ ಮಾತಾ ಆಧ್ಯಾತ್ಮಿಕ ಬಳಗದ ಅಧ್ಯಕ್ಷರಾದ ಸರ್ವಮಂಗಳ ಜಿ ಪಾಟೀಲ, ಅಕ್ಕನಬಳಗದ ಅಧ್ಯಕ್ಷರಾದ ಕೋಮಲಾ ಕುದರಿಮೋತಿ, ಗೌರಿಶಂಕರ ಮಹಿಳಾ ಸಂಘದ ಅಧ್ಯಕ್ಷರಾದ ರತ್ನಾ ಪಾಟೀಲ, ಬಳಗದ ಕಾರ್ಯದರ್ಶಿ ರೇಣುಕಾ ವಿ.ಹಡಗಲಿ, ಉಪಕಾರ್ಯದರ್ಶಿಯಾದ ಡಾ. ರಾಧಾ ಕುಲಕರ್ಣಿ, ನಿರ್ದೆಶಕರಾದ ಹಂಪಮ್ಮ ಶಿವನಗೌಡ ಶಾಂತಗಿರಿ, ಇಂದಿರಾ ಎನ್ ಭಾವಿಕಟ್ಟಿ, ಜ್ಯೋತಿ ಎಸ್ ಅಗಡಿ, ಸರೋಜಾ ಬಿ ಪಾಟೀಲ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
    ಲಕ್ಷ್ಮೀ ಸಂಗಡಿಗರು ಪ್ರಾರ್ಥಿಸಿದರು. ಅರುಣಾ ಜೂಡಿ, ಲಲಿತಾ ನಾಲ್ವಾಡ ಪ್ರಾರ್ಥಿಸಿದರು. ಶೀಲಾ ಎಮ್ ಹಲಗೇರಿ ನಿರೂಪಿಸಿದರು. ಬಳಗದ ಉಪಾಧ್ಯಕ್ಷರಾದ ಮಮತಾ ಕುದರಿಮೋತಿ ಸ್ವಾಗತಿಸಿದರು. ಗೀತಾ ವಂಧಿಸಿದರು.
Please follow and like us:
error