ಶ್ರೀನಿವಾಸ ಪಂಡಿತ ರಾಷ್ಟ್ರೀಯ ಕರಾಟೆ ರೆಫ್ರೀ

  ಇದೆ ದಿ. ೩೦ನವಂಬರ್ ೨೦೧೪ ರಂದು ಬೆಂಗಳೂರನ ಐ ಎ ಟಿ ಹಾಲ್ ನಲ್ಲಿ ರಾಷ್ಟ್ರೀಯ ಕರಾಟೆ ರೆಫ್ರೀ ಸೆಮಿನಾರ್ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದರು. ಕರ್ನಾಟಕದಲ್ಲಿ ಮೊದಲ ಬಾರಿ ಈ ಸೆಮಿನಾರನ್ನು ವಲ್ಡ್ ಕರಾಟೆ ರೆಫ್ರೀ ಹಾಗೂ ಕೆ ಅ ಐ, ನ ರೆಫ್ರೀ ಚೆರ‍್ಮನ್ ಆದ ಶಿಹಾನ್ ಭಾಸ್ಕರ್ ಸಿನೌವಸ್ಸಾನೆ ಇವರು ಮಾಡಿದ್ದಾರೆ. ಇಂಥಹ ವಿಶೇಷ ಸೆಮಿನಾರ್ ಗೆ ಎಲ್ಲಾ ಜಿಲ್ಲೆಯಿಂದ  ಸುಮಾರು ಎಂಭತ್ತು ಕರಾಟೆ ತರಬೇತುದಾರರು ಭಾಗವಹಿಸಿದ್ದ ಈ ಸೆಮಿನಾರ್‌ದರಲ್ಲಿ ಕೊಪ್ಪಳ ಜಿಲ್ಲೆಯಿಂದ ಸೆನ್‌ಸೈ ಶ್ರೀನಿವಾಸ ಪಂಡಿತ ಪ್ರತಿನಿಧಿಸಿದ್ದರು.
     ಶಿಬಿರದಲ್ಲಿ ಕುಮಿಟೆ (ಫೈಟ್) ಕುರಿತು ಮತ್ತು ೨೦೧೫ ರ ಹೊಸ ನೀತಿ ನಿಂiiಮಾವಳಿ ಸೆಮಿನಾರ್ ವರ್ಷನ್ ೦೯, ಕುರಿತು ಎಲ್ಲ ಶಿಬಿರಾರ್ಥಿಗಳಿಗೆ ಹತ್ತು ತಾಸುಗಳ ತರಬೇತಿ ನೀಡಿದಲ್ಲದೆ, ಮೌಖಿಕ ಹಾಗೂ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಗೆ ಪರೀಕ್ಷೀಸಿದರು.  ಈ ರೆಫ್ರೀ ಸೆಮಿನಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶ್ರೀನಿವಾಸ ಪಂಡಿತ ರಿಗೆ ವಲ್ಡ್ ಕರಾಟೆ ರೆಫ್ರೀ ಹಾಗೂ ಕೆ ಅ ಐ, ನ ಚೆರ‍್ಮನ್ ಆದ ಶಿಹಾನ್ ಭಾಸ್ಕರ್ ಸಿನೌವಸ್ಸಾನೆ ಪ್ರಮಾಣ ಪತ್ರ ಪಡೆದಿದ್ದಾರೆಂದು ಶಿಹಾನ್ ದಶರಥ ದುಮನಸೂರ ಮತ್ತು ಶಿಹಾನ್ ಮಲ್ಲಿಕಾರ್ಜುನ ಕೊತಬಾಳ ತಿಳಿಸಿದ್ದಾರೆ.

Leave a Reply