fbpx

ನಿಷ್ಠಾವಂತರನ್ನು ಕಾಂಗ್ರೆಸ್ ಪಕ್ಷ ಕೈಬಿಡುವುದಿಲ್ಲ-ಜುಲ್ಲು ಖಾದ್ರಿ

 ಕೊಪ್ಪಳ,ಮಾ:೦೨ :  ಕಾಂಗ್ರೆಸ್  ಪಕ್ಷವು ನಿಷ್ಠಾವಂತರಿಗೆ ಎಂದೂ ಕೈಬಿಡುವುದಿಲ್ಲ. ಪಕ್ಷ ನಿಷ್ಠೆ ಇದ್ದ ಕಾರ್ಯಕರ್ತನನ್ನು ಪಕ್ಷ ಒಂದಿಲ್ಲ ಒಂದು ರೀತಿ ಗುರುತಿಸಿ ಅವನ ಸೇವಾ ನಿಷ್ಠೆ ಅನುಸಾರವಾಗಿ ಹುದ್ದೆಗಳನ್ನು ನೀಡುತ್ತದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಸಯ್ಯದ್ ಜುಲ್ಲು ಖಾದ್ರಿ ಹೇಳಿದರು. ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಪದಗ್ರಹಣ ಸ್ವೀಕರಿಸಿ ಮಾತನಾಡುತ್ತಿದ್ದರು.
            ಕಾಂಗ್ರೇಸ್ ಪಕ್ಷದ ಯಾವೂಬ್ಬ ಕಾರ್ಯಕರ್ತನು ವಿಚೇಲಿತನಾಗಬಾರದು ಅವಕಾಶಗಳು ಎಲ್ಲಾ ಕಾರ್ಯಕರ್ತರಿಗೂ ಬಂದೆ ಬರುತ್ತದೆ. ಸತ್ಯ-ನಿಷ್ಠ-ಧರ್ಮಾನುಸಾರವಾಗಿ ನನ್ನ ಅಧಿಕಾರದ ಅವದಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ನನ್ನನ್ನು ಅಧ್ಯಕ್ಷಸ್ಥಾನಕ್ಕೆ ಅವಕಾಶಮಾಡಿಕೊಟ್ಟ ಜಿಲ್ಲಾ ಕಾಂ

ಗ್ರೇಸ್ ಸಮೀತಿಯ ಅಧ್ಯಕ್ಷರಿಗೂ ಶಾಸಕರಿಗೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಿಗಳಿಗೂ ಹಾಗೂ ಪಕ್ಷದ ಕಾರ್ಯಕರ್ತರಿಗೂ ನಾನು ಚಿರರುಣಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ, ಪಕ್ಷದ ಮುಖಂಡರಾದ ಎಸ್.ಬಿ.ನಾಗರಳ್ಳಿ, ಶಾಂತಣ್ಣ ಮುದುಗಲ್, ಅಂದಣ್ಣ ಅಗಡಿ, ಕೆ.ಎಮ್.ಸಯ್ಯದ್, ನಗರಸಭೆ ಅಧ್ಯಕ್ಷರಾದ ಬಸಮ್ಮ ಹಳ್ಳಿಗುಡಿ, ಬಾಳಪ್ಪ ಬಾರಕೇರ, ಗವಿಸಿದ್ದಪ್ಪ ಮುದುಗಲ್, ಹನುಮರೆಡ್ಡಿ ಹಂಗನಕಟ್ಟಿ, ಈಶಪ್ಪ ಮಾದಿನೂರು, ಶ್ರೀಮತಿ ಶಕುಂತಲಾ ಹುಡೇಜಾಲಿ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮಲ್ಲಪ್ಪ ಕವಲೂರು, ಮುತ್ತುರಾಜ ಕುಷ್ಟಗಿ, ಮಹೇಶ ಭಜಂತ್ರಿ, ಖಾಜಾವಲಿ ಬನ್ನಿಕೊಪ್ಪ, ಕಾಟನ್ ಪಾಷಾ, ಬಾಷುಸಾಬ್ ಕತೀಬ್,ಜಾಕೀರ್ ಕಿಲ್ಲೇದಾರ, ಕೃಷ್ಣ ಇಟ್ಟಂಗಿ, ಇನ್ನೂ ಅನೇಕ ಕಾಂಗ್ರೇಸ್ ಧುರೀಣರು ಮತ್ತು ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!