ಲಿಂಗಣ್ಣ ಸತ್ಯಂಪೇಟೆ ಇವರ ಕೊಲೆಯ ಹಿಂದಿನ ಕೈಗಳನ್ನು ಬಂಧಿಸಿ

ಜಿಲ್ಲಾಧಿಕಾರಿಗಳಿಗೆ ಬಸವ ಸಮಿತಿಯಿಂದ ಮನವಿ
ಕೊಪ್ಪಳ : ದಿನಾಂಕ ೨೫ ರಂದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೀನಕೃತ್ಯವೊಂದು ಗುಲಬುರ್ಗಾ ಸಮೀಪ ಜರುಗಿದೆ., ಸಮಾಜದ ಕೊಳಕುಗಳನ್ನು ನಿರ್ಭಿಡೆಯಿಂದ ಟೀಕಿಸುತ್ತಿದ್ದ, ಬಸವ ಮಾರ್ಗ ಪತ್ರಿಕೆಯ ಸಂಪಾದಕರು, ಬಸವ ಮಾರ್ಗಚೀಂತಕರು, ಬಸವಪ್ರೇಮಿಗಳು ಪ್ರೇಮಿಗಳು, ಆದ ಲಿಂಗಣ್ಣ ಸತ್ಯಂಪೇಟೆ ಇವರ ಕಗ್ಗೊಲೆಯಿಂದ ನಾಡಿನ ಜನತೆ ದಿಗ್ಭ್ರಮೆಗೊಂಡಿದ್ದಾರೆ.  
ಇಂತಹ ಪ್ರಗತಿಶೀಲ ಮತ್ತು ಸ್ವಾಸ್ಥ್ಯಸಮಾಜದ ಪರಿಕಲ್ಪನೆಯ ಚಿಂತಕರ ಹತ್ಯೆಯು ದುರದೃಷ್ಟಕರ ವಿಚಾರ. ಇವರ ಕೊಲೆ ಎಲ್ಲಬಸವಾಭಿಮಾನಿಗಳಿಗೆ, ಶರಣಚಿಂತಕರಿಗೆ, ಅರಗಿಸಿಕೊಳ್ಳಲಾರದ ವಿಷಯವಾಗಿದೆ. ಇವರ ಕೊಲೆಯು ಅಭಿವ್ಯಕ್ತಿ ಸ್ವಾತಂತ್ರದ ಕೊಲೆಯಾದಂತೆ. ಕೊಲೆಯ ಹಿಂದಿನ ಕಾಣದ ಕೈಗಳನ್ನು ಅತೀ ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಲೇಬೆಕೆಂದು ಬಸವ ಸಮಿತಿಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಬಸವರಾಜ ಬಳ್ಳೊಳ್ಳಿ, ಎಲ್.ಎಚ್. ಪಾಟೀಲ, ಬಸಯ್ಯ ಸಸಿಮಠ, ದಾನಪ್ಪ ಶೆಟ್ಟರ, ರೇವಣ ಸಿದ್ದಪ್ಪ, ಮಹೇಶ ಬೆಳವಣಿಕೆ, ಹನುಮೇಶ ಕಲ್ಮಂಗಿ, ಶರಣಪ್ಪ ಗಾಳಿ, ಮಹೇಶ ಮಿಟ್ಟಲ್‌ಕೋಡ್ ಮೊದಲಾದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

Leave a Reply