You are here
Home > Koppal News > ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ-ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ.

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ-ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ,ಜ:೨೪ ಕೊಪ್ಪಳ ಕ್ಷೇತ್ರದ ನೀರಲಗಿ, ಮತ್ತೂರು, ಹನಕುಂಟಿ, ಬೇಟಗೇರಿ, ತಿಗರಿ, ಬೋಚನಹಳ್ಳಿ,ಬೈರಾಪೂರು, ನೇಲೋಗಿಪೂರ, ಹಲವಾಗಲಿ, ಮೋರನಾಳ ಗ್ರಾಮಗಳಲ್ಲಿ ಜನಸ್ಪಂದನ ಹಾಗೂ ಹೆಚ್.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ರೂ ಮೊತ್ತ ೧ ಕೋಟಿ ಸಿಸಿ ರಸ್ತೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶಾಲಾ ಕೊಠಡಿಗಳ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ರಾಜ್ಯದ ಜನಪ್ರೀಯ ಮುಖ್ಯಮಂತಿಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಬಡಮಕ್ಕಳ ಶಿಕ್ಷಣಕ್ಕೆ ವಿಧ್ಯಾಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವೈಧ್ಯಕೀಯ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭಗೊಳ್ಳಲಿವೆ ವಿಧ್ಯಾರ್ಥಿಗಳು ಹೆಚ್ಚಿನ ವಿಧ್ಯಾಬ್ಯಾಸಕ್ಕಾಗಿ ಬೇರೆಕಡೆ ಹೋಗಲು ಅವಶ್ಯಕತೆ ಇರುವುದಿಲ್ಲ ನಮ್ಮ ಕ್ಷೇತ್ರದಲ್ಲಯೇ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣವನ್ನು ಪಡೆಯಬಹುದಾಗಿದೆ ಅದಕ್ಕಾಗಿ ಕ್ಷೇತ್ರದ ಎಲ್ಲಾ ಜನರು ತಮ್ಮ ಮಕ್ಕಳನ್ನು ಶಿಕ್ಷಿತರಾಗಿ ಮಾಡಬೇಕು. ಗ್ರಾಮ ವಿಕಾಸನಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡುತ್ತಿದ್ದು, ಹಲಗೇರಿಯಿಂದ-ಕೇಸಲಾಪೂರದವರೆಗೆ ೫/೫ ಮೀಟರ ಡಾಂಬರ ರಸ್ತೆಯ ಕಾಮಗಾರಿ ಶೀಗ್ರವೇ ಪ್ರಾರಂಭಗೊಳ್ಳಲಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗಳಿಗೆ ೮೮ ಕೋಟಿ ಅನುದಾನ ಮಂಜೂರಾಗಿದ್ದು ಅದೆರೀತಿ ಕೊಪ್ಪಳ ಕ್ಷೇತ್ರದ ಕೆರೆಗಳ ಪುನರಚೇತನಕ್ಕೆ ೮೧ ಕೋಟಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿದ್ದು, ಬರುವ ದಿನಗಳಲ್ಲಿ ಬೇಟಗೇರಿ ಮತ್ತು ಅಳವಂಡಿ ಗ್ರಾಮಗಳ ಏತ ನೀರಾವರಿ ಕಾಮಗಾರಿಗೆ ಸುಮಾರು ಅಂದಾಜು ಮೊತ್ತ ೮೪ ಕೋಟಿಯ ಕಾಮಗಾರಿಗೆ ಟೆಂಡರ್ ಪರಿಕ್ರೀಯೆ ಪ್ರಾರಂಭಗೊಂಡು ಕೊಪ್ಪಳ ಕ್ಷೇತ್ರವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೆ.ಎಮ್.ಸಯ್ಯದ್, ವೆಂಕನಗೌಡ್ರು ಹಿರೇಗೌಡ್ರು, ಹಟ್ಟಿ ಭರಮಪ್ಪ, ಗಾಳೆಪ್ಪ ಪೂಜಾರ, ಯಮನೂರಪ್ಪ ನಾಯಕ್, ಬಸವರೆಡ್ಡಿ ಹಳ್ಳಿಕೇರಿ, ಹೊನ್ನಪ್ಪ ಗೌಡ, ಸುರೇಶ ದಾಸರೆಡ್ಡಿ, ಶರಣಯ್ಯ ಮತ್ತೂರು, ಬಸವರಾಜ ಕತ್ತಿ, ಅಡಿವೆಪ್ಪ ರಾಟಿ, ಭರಮಪ್ಪ ಕಂಬಳಿ, ಹನುಮಂತಪ್ಪ ಬೆಟಗೇರಿ, ನಾರಾಯಣಪ್ಪ ಬೆಟಗೇರಿ, ಪರಶುರಾಮ ಬೈರಾಪೂರು, ಶರೀಫ್ ಬೈರಾಪೂರು, ತಹಶಿಲ್ದಾರರು ಪುಟ್ಟರಾಮಯ್ಯ, ಈ.ಯೋ.ಕೃಷ್ಣಮೂರ್ತಿ, ತಾಲೂಕು ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ, ಕೃಷಿ ಅಧಿಕಾರಿಗಳಾದ ಸಹದೇವಪ್ಪ, ಪಶು ವೈದ್ಯಾದಿಕಾರಿಗಳಾದ ಡಾ|| ಸಾಲಿ, ಅಭಿಯಂತರರು ಗುತ್ತಿಗೆದಾರರು, ಇನ್ನೂ ಅನೇಕ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

Top