You are here
Home > Koppal News > ಶರಣರ ಚರಿತ್ರೆಗಳ ಇತಿಹಾಸ ತಿಳಿಯಲು ರಂಗಕಲೆ ಸಹಕಾರಿ-ಸಿದ್ಧೇಶ್ವರ ಮಹಾಸ್ವಮಿಗಳು

ಶರಣರ ಚರಿತ್ರೆಗಳ ಇತಿಹಾಸ ತಿಳಿಯಲು ರಂಗಕಲೆ ಸಹಕಾರಿ-ಸಿದ್ಧೇಶ್ವರ ಮಹಾಸ್ವಮಿಗಳು

ಕೊಪ್ಪಳ : ಶರಣರ  ಚರಿತ್ರೆಗಳ ಇತಿಹಾಸ ತಿಳಿಯಲು  ರಂಗಕಲೆ  ಸಹಕಾರಿಯಾಗುದರ ಜೋತೆಗೆ ಬದುಕಿನ ಜಂಜಾಟದಲ್ಲಿ ನೊಂದ ಮನಸ್ಸಿಗೆ ಉತ್ಸಾಹ ನೀಡುತ್ತದೆ ಎಂದು ಬಿಕನಹಳ್ಳಿ-ಮೈನಹಳ್ಳಿ ಉಜ್ಜಯನಿ ಶಾಖಾ ಮಠದ ಶ್ರೀ. ಸಿದ್ಧೇಶ್ವರ  ಶಿವಚಾರ್ಯ ಮಹಾಸ್ವಮಿಗಳು ಹೇಳಿದರು.
ಅವರು ತಾಲೂಕಿನ  ಮೈನಹಳ್ಳಿ  ವೀರಭದ್ರಯ್ಯ ತಾತನವರ  ಮಠದ  ಗೋಪುರದ ಸಹಾಯಾರ್ಥವಾಗಿ ಶುಕ್ರವಾರ ರಾತ್ರಿ ನಡೆದ ಶಿವಶರಣೆ ಬುಡ್ಡಮ್ಮದೇವಿ ಮಹಾತ್ಮೆ  ನಾಟಕ ಪ್ರದರ್ಶನದಲ್ಲಿ  ಭಾಗವಹಿಸಿ  ಆಶೀರ್ವಚನ ನೀಡಿದರು. 
ಶರಣರು, ಸಂತರು, ಸಾದಕರು ನೆಲೆಸಿದ ನಾಡಿನಲ್ಲಿ ಭಕ್ತರ  ಉಜ್ಜಲ ಭವಿಶ್ಯಕ್ಕಾಗಿ ಮೈನಹಳ್ಳಿಯಲ್ಲಿ  ಬುಡ್ಡಮ್ಮ  ಎಂಬ ನಾಮದಿಂದ  ಭೂಮಿಗೆ ಬಂದ  ಬುಡ್ಡಮ್ಮದೇವಿ  ಚರಿತ್ರೆಯನ್ನು  ಪ್ರತಿಯೊಬ್ಬರು  ಅರಿಯಲು  ಕಲೆಯ ಮೂಲಕ  ಅಳವಡಿಸಿದ್ದು  ಶ್ಘಾಘನೀಯವಾಗಿದೆ.  ಇಂತಹ  ಶರಣ ಶಿವಶರಣೆಯರ ಚಿರಿತ್ರೆಯನ್ನು  ಆಲಿಸುವಲ್ಲಿ ಮುಂದಾದರೆ  ಜೀವನ  ಉತ್ಸಾಹದಿಂದಿರುತ್ತದೆ  ಎಂದು ಹೇಳಿದರು. 
 ನಂತರ  ಪತ್ರಕರ್ತ  ಸೋಮರೆಡ್ಡಿ  ಅಳವಂಡಿ ಮಾತನಾಡಿ, ಹಿಂದಿನ  ಟಿವಿ,ಸಿನಿಮಾ ಹಾವಳಿಂದ  ನಶೀಸಿ ಹೊಗಲಾರಂಬಿಸಿದ  ರಂಗ ಕಲೆ ಉಳಿಸಿ ಬೆಳೆಸಲು  ಪ್ರತಿಯೋಬ್ಬರ ಸಹಕಾರ ಅವಶ್ಯವಾಗಿದೆ.  ಗ್ರಾಮೀಣ  ಭಾಗದ ಕಲಾವಿದರ ಪ್ರತಿಭೆಗಳನ್ನು ಗುರುತಿಸುವಲ್ಲಿ  ರಂಗಕಲೆ ಸಹಕಾರಿಯಾಗಲಿದೆ  ಎಂದು ಹೇಳಿದ ಅವರು ಸಿನಿಮಾ ತಾರೆಯರನ್ನು  ಮಿರಿಸುವಂತ  ಕಲೆ ಗ್ರಾಮೀಣ  ಪ್ರದೇಶದ ಕಲಾವಿದರಲ್ಲಿ  ಅಡಗಿದೆ ಅಂತಹ ಕಲಾವಿದರಿಗೆ  ಪ್ರೋತ್ಸಾಹಿಸುವ ಮೂಲಕ  ರಂಗ ಕಲೆಯನ್ನು  ಉಳಿಸಿ  ಬೆಳೆಸಲು ಮುಂದಾಗಬೇಕು ಎಂದು  ಹೇಳಿದರು.
 ಕಾರ್ಯಕ್ರಮದ  ಉದ್ಘಾಟನೆಯನ್ನು  ತಾ.ಪಂ.ಅಧ್ಯಕ್ಷ ಮುದೆಗೌಡ ಪಾಟೀಲ್ ನೆರವೆರಿಸಿದರು.  
ಕಾರ್ಯಕ್ರಮದಲ್ಲಿ  ಗುರುಪಾದಪ್ಪ ಮಾಸ್ತರ, ಪತ್ರಕರ್ತರಾದ  ಶರಣಪ್ಪ ಬಚಲಾಪೂರ, ತಿಪ್ಪನಗೌಡ  ಪಾಟೀಲ್ ಬಿಕನಹಳ್ಳಿ, ಕಾಂಗ್ರೆಸ್ ಮುಖಂಡ ಬಸವರೆಡ್ಡಿ ಹಳ್ಳಿಕೇರಿ, ವಿರುಪಾಕ್ಷಪ್ಪ ಮುದ್ದಾಬಳ್ಳಿ,  ವೆಂಕನಗೌಡ ಹಿರೆಗೌಡ್ರ,  ಶಂಕರಗೌಡ ಹಿರೇಗೌಡ್ರ,  ಗ್ರಾ.ಪಂ.ಅಧ್ಯಕ್ಷ  ಯಮನೂರಪ್ಪ ಭಜಂತ್ರಿ, ಸದಸ್ಯರಾದ  ಮಹೇಂದ್ರಪ್ಪ ಮೂಲಿಮನಿ, ಅಜಯಕುಮಾರ ಪಾಟೀಲ್, ಗ್ಯಾನಪ್ಪ ಕತ್ತಿ,  ಸುರೇಶರೆಡ್ಡಿ ಬೆಳವಿನಾಳ, ಕುಬೇಗೌಡ ಪಾಟೀಲ್, ಕೇಶವರೆಡ್ಡಿ ಮಾದಿನೂರ,  ನಿಂಗಪ್ಪ ಯತ್ನಟ್ಟಿ, ಶಂಕ್ರಯ್ಯ ಮುತ್ತಾಳ,  ಅನೇಕರು ಉಪಸ್ಥಿತರಿದ್ದರು.ಶಿಕ್ಷಕ ದೇವಿಂದ್ರಪ್ಪ ಕುರಡ್ಗಿ ಕಾರ್ಯಕ್ರಮವನ್ನು  ನಿರುಪಿಸಿ ವಂದಿಸಿದರು.

Leave a Reply

Top