ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಕೊಪ್ಪಳ:  ೦೨ ರಂದು ಬೆಳಿಗ್ಗೆ ಶ್ರೀ ಗವಿಮಠ ಆವರಣದಲ್ಲಿ  ಶ್ರೀ ಗವಿಸಿದ್ದೇಶ್ವರ ಶಿಕ್ಷಕ   ತರಬೇತಿಯ ರಾಷ್ಟ್ರೀಯ  ಸೇವಾ  ಯೋಜನೆಯ ಘಟಕದ ಅಡಿಯಲ್ಲಿ ೨೦೧೧-೧೨ ನೇ ಸಾಲಿನ ವಿಶೇಷ ಶಿಬಿರವನ್ನು ಉದ್ಘಾಟಿಸಿಲಾಯಿತು ಉದ್ಘಾಟಕರಾಗಿ ಡಯಟ್‌ನ ಹಿರಿಯ ಉಪನ್ಯಾಸಕರಾದ  ಹಾಗೂ ಎನ್.ಎಸ್.ಎಸ್. ನೋಡಲ್ ಅಧಿಕಾರಿಗಳಾದ  ಯು.ಎನ್. ಬೆಟದೂರ  ಆಗಮಿಸಿದ್ದರು ಅವರ ತಮ್ಮ ಭಾಷಣದಲ್ಲಿ ಶಿಬಿರಾರ್ಥಿಗಳೆಲ್ಲರು ಮನವೂರ್ಪಕವಾಗಿ ಭಾಗವಹಿಸಿ  ಶಿಬಿರದ ಯಶಸ್ವಿಗೆ  ಕಾರಣರಾಗಬೇಕೆಂದು ಕರೆನೀಡಿದರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಟಿ.ಜಿ.ಹಿರೇಮಠ ವಕೀಲರು ಹಾಗೂ ಅಧ್ಯಕ್ಷರು  ಶ್ರೀ ಗ.ವಿ.ವ.ಟ್ರಸ್ಟ ಕೊಪ್ಪಳ ಇವರು ವಹಿಸಿಕೊಂಡಿದ್ದರು  ಕಾರ್ಯಕ್ರಮದ ಅಧಿಕಾರಿಗಳಾದ  ಜಿ.ಎಸ್. ಸೊಪ್ಪಿಮಠ ಎನ್.ಎಸ್.ಎಸ್. ಪ್ರತಿಜ್ಞಾವಿಧಿ ಬೋಧಿಸಿದರು   ಎಲ್.ಎಸ್. ಹೊಸಮನಿ ಸ್ವಾಗತಿಸಿದರು    ವಿ.ಆರ್.ಪಾಟೀಲ ವಂದಿಸಿದರು ಶ್ರೀ ಎಸ್.ವಿ ಅಂಗಡಿ ಕಾರ್ಯಕ್ರಮವನ್ನು  ನಿರ್ವಹಿಸಿದರು  ವೇದಿಕೆಯ ಮೇಲೆ ಸಂಸ್ಥೆಯ ಪ್ರಾಚಾರ್ಯರಾದ  ಎಸ್.ಎಫ್.ಕರಡಿ ಉಪಸ್ಥಿತರಿದ್ದರು ಸಮಾರಂಭದಲ್ಲಿ ಸಂಸ್ಥೆಯ  ಸಿಬ್ಬಂದಿ ವರ್ಗದವರು  ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು 
Please follow and like us:
error