ಹೃದಯವನ್ನು ಬೆಸೆಯುವ ಕೆಲಸ ಮಾಡಬೇಕಿದೆ

ಶಿಕ್ಷಣದ
 ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಮುಂದಿನ ಜನಾಂಗವನ್ನು ನೈತಿಕವಾಗಿ ಬಲಿಷ್ಠಗೊ ಳಿಸುವುದಕ್ಕಾಗಿ ನಮ್ಮ ಶಿಕ್ಷಣದಲ್ಲಿ ಬದಲಾವಣೆ ತರಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿದೆ ಇದನ್ನು ಸರಿಪಡಿಸುವುದಕ್ಕಾಗಿ ಮತ್ತು ಇಂದಿನ ಸಮಾಜ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಶಿಕ್ಷಣ ಮುಖ್ಯ ಕಾರಣ.ಹೃದಯವನ್ನು ಬೆಸೆಯುವ ಕೆಲಸ ಮಾಡಬೇಕಿದೆ  . ಉತ್ತಮ ಸಮಾಜ ಕಟ್ಟುವತ್ತ ಎಸ್ಐಓ ಪ್ರೋತ್ಸಾಹಿಸುತ್ತದೆ ಎಂದು ಎಸ್ಐಓ ರಾಷ್ಟ್ರಾಧ್ಯಕ್ಷ  ಆಶ್ಫಕ್ ಅಹ್ಮದ್ ಷರೀಪ್ ಹೇಳಿದರು. ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
         
 ರಾಜ್ಯಾದ್ಯಂತ  ಎಸ್ಐಓ ಹಮ್ಮಿಕೊಂಡಿರುವ ವಿದ್ಯಾರ್ಥಿ ಸಮ್ಮೇಳನದ ಕುರಿತು ಮಾತನಾಡಿದರು. ನಂತರ ತೌಸೀಪ್ ಅಹ್ಮದ್ ರವರು ರಾಜ್ಯದಲ್ಲಿ ಎಸ್ ಐಓ ಸಂಘಟನೆಯಿಂದ ಹಮ್ಮಿಕೊಳ್ಳಲಾದ ವಿದ್ಯಾರ್ಥಿ ಹೋರಾಟಗಳ ಕುರಿತು ಮಾತನಾಡಿದರು. 
 ತೌಸೀಪ್ ಅಹ್ಮದ್  ರಾಜ್ಯಾಧ್ಯಕ್ಷರು,  ಸಾಧತ್ ಹುಸೇನ್ ರಾಜ್ಯ ವಿಸ್ತರಣಾ ಕಾರ್ಯದರ್ಶಿ, ಝಕಾರಿಯಾ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 
Please follow and like us:
error

Related posts

Leave a Comment