ಫೆ. ೩ ರಂದು ಭಾರತ ಹುಣ್ಣಿಮೆ : ಹುಲಿಗಿಯಲ್ಲಿ ವಿವಿಧ ಕಾರ್ಯಕ್ರಮ

 

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಪ್ಪಳ ತಾಲೂಕು, ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಫೆ. ೦೩ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

  ಭಾರತ ಹುಣ್ಣಿಮೆ ಅಂಗವಾಗಿ ಅಂದು ರಾತ್ರಿ ೯ ಗಂಟೆಗೆ ಗಂಗಾದೇವಿಗೆ ಪೂಜೆ, ರಾತ್ರಿ ೯.೩೦ ಕ್ಕೆ ಶ್ರೀ ಕ್ಷೇತ್ರಪಾಲ ಅಜ್ಜಪ್ಪ ದೇವರಿಗೆ ಗುಗ್ಗರಿ ಮುಟಿಗಿ ಪೂಜೆ, ರಾತ್ರಿ ೯.೪೫ ಕ್ಕೆ ಶ್ರೀ ಮಾತಂಗಿ ದೇವಿಯವರಿಗೆ ಕ್ಷೀರ ಸಮರ್ಪಣೆ, ರಾತ್ರಿ ೧೦.೦೦ಕ್ಕೆ ಪೂಜಾರರಿಗೆ ಗುಗ್ಗರಿ ಮುಟಿಗಿ ಉಡಿ ತುಂಬುವುದು. ನಂತರ ಭಕ್ತಾಧಿಗಳಿಗೆ ಗುಗ್ಗರಿ ಮುಟಿಗಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿವೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ವಾಹನಗಳು ಕ್ಷೇತ್ರಕ್ಕೆ ಬರುವುದರಿಂದ ವಾಹನ ಪೂಜೆ ಮಾಡಲಾಗುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ  ತಿಳಿಸಿದ್ದಾರೆ.

Leave a Reply