ಒಂದೇ ದಿನದಲ್ಲಿ ಲಕ್ಷ್ಯ ಲಕ್ಷ್ಯ ರೊಟ್ಟಿ ಹಾಗೂ ದವಸ ಧಾನ್ಯಗಳ ಮಹಾಪುರ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಗೆ ಇನ್ನೂ ಕೇವಲ ೩ ದಿನ ಬಾಕಿ  ಉಳಿದಿದ್ದೂ, ಈಗಾಗಲೇ ೩ – ೪ ಲಕ್ಷ್ಯ ರೊಟ್ಟಿಗಳು ಮಹಾದಾಸೋಹಕ್ಕೆ ಅರ್ಪಿತವಾಗಿವೆ. ಇಂದು ಒಂದೇ ದಿವಸದಲ್ಲಿ ೧.೫ ಲಕ್ಷ್ಯ ರೊಟ್ಟಿಗಳು ಸಂಗ್ರಹವಾಗಿವೆ. ಇನ್ನೂ  ೩ ದಿವಸದಲ್ಲಿ  ರಥೋತ್ಸವದ ವೇಳೆಗೆ ೧೨-೧೫ ಲಕ್ಷ್ಯ ರೊಟ್ಟಿಗಳು  ಶ್ರೀಗವಿಮಠದ ದಾಸೋಹಕ್ಕೆ ಬರುತ್ತವೆ. ಜೊತೆಗೆ ದವಸ -ಧಾನ್ಯಗಳ ಮಹಾಪುರವೇ ಹರಿದು ಬರುತ್ತದೆ.  ಇಂದು  ಕನಕಗಿರಿ, ಗುನ್ನಾಳ,ಕೋಳಿಹಾಳ, ವದಗನಹಾಳ, ಶ್ಯಾಪುರ, ಗಂಗಾವತಿ,ಇಂದರಗಿ,ಕಟಗಿಹಳ್ಳಿ, ತಾಳಕೇರಿ, ಕಾಮನೂರು, ಯಲಮನಗೇರಿ, ನೆಲಜೇರಿ,ಹುಲಿಹೈದರ, ಹನುಮನಹಟ್ಟಿ, ದದೇಗಲ್  ಹಾಗೂ ಕೊಪ್ಪಳದ ಕುವೆಂಪು ನಗರದ ಭಕ್ತರಿಂದ  ೧ ಲಕ್ಷ ರೊಟ್ಟಿಗಳು, ೩೦೦ ಪಾಕೇಟ್ ದವಸಧಾನ್ಯ,  ೧ ಟ್ರ್ಯಾಕ್ಟರ‍್ತ ತರಕಾರಿ ಇವೆಲ್ಲವುಗಳೂ ಇಂದು ಒಂದೇ ದಿನದಲ್ಲಿ ದಾಸೋಹಕ್ಕೆ ಸಮರ್ಪಿತವಾದವು.  
ದಿ  ೧೬-೦೧-೨೦೧೪ ರ ಜಾತ್ರಾ ಕಾರ್ಯಕ್ರಮ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೧೬-೦೧-೨೦೧೪ ರಂದು ಗುರುವಾರ ಸಾಯಂಕಾಲ ೬ ಗಂಟೆಗೆ ಶ್ರೀಗವಿಸಿದ್ಧಶ್ವರ ಮೂರ್ತಿಯ ಪಲ್ಲಕ್ಕಿ ಉತ್ಸವ ಕೋಟೆ ಮಠದಿಂದ ಪ್ರಾರಂಭವಾಗೊಂಡು ನಗರದ ಪ್ರಮುಖ ಬೀದಿಗಳ ಮೂಲಕ ಗವಿಮಠ ತಲುಪುವದು. ಮುದ್ದಾಬಳ್ಳಿ ಹಾಗೂ ಮಂಗಳಾಪುರ ಗ್ರಾಮಗಳಿಂದ ಶ್ರೀಗವಿಸಿದ್ಧೇಶ್ವರ ಉತ್ಸವ ಮೂರ್ತಿ ಹಾಗೂ ಹಲಗೇರಿಯ ವೀರನಗೌಡ ಪಾಟೀಲ ಇವರ ಮನೆಯಿಂದ ರಥದ ಕಳಸ ಉತ್ಸವದೊಂದಿಗೆ ಹೊರಟು ಗವಿಮಠ ತಲುಪವದು. ಈ ಮೆರವಣಿಗೆಗಳಲ್ಲಿ ಅಸಂಖ್ಯಾತ ಭಕ್ತಾಧಿಗಳು ಭಾಗವಹಿಸಿ ಭಕ್ತಿ ಭಾವ ಮೆರೆಯುತ್ತಾರೆ.
ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಗವಿಮಠ
ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗೆ ಇನ್ನೂ ಕೇವಲ ೩ ದಿನ ಬಾಕಿ  ಉಳಿದಿದ್ದೂ ಈಗೀನಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಗವಿಮಠಕ್ಕೆ ಆಗಮಿಸುತ್ತಿದ್ದಾರೆ. ಆಗಮಿಸುವ ಭಕ್ತರಿಗೆ ಸಂಸ್ಥಾನ ಶ್ರೀ ಗವಿಮಠವು ಅನೇಕ ಬಣ್ಣ ಬಣ್ಣದ  ವಿದ್ಯುತ್ ದೀಪಗಳಿಂದ ಕಂಗೊಳಿಸಿ ಭಕ್ತರ ಮನಸ್ಸನ್ನು ಆಕರ್ಷಿಸುತ್ತಿದೆ. ಮಹಾದ್ವಾರ, ಕರ್ತೃಗದ್ದೂಗೆ, ಮಹಾದಾಸೋಹ ಮಂಟಪ, ಶಿಲಾಮಂಟಪ, ಹಾಗೂ ಗವಿಮಠದ ಆವರಣದೊಳಗಿರುವ ಗಿಡಮರಬಳ್ಳಿಗಳ ಮೇಲೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗಾರಗೊಳಿಸಲಾಗಿದೆ. ನಕ್ಷತ್ರಗಳಂತೆ ಮಿನುಗುವ ವಿದ್ಯುತ್ ದೀಪಗಳು, ಸ್ವಾಗತ ಕಮಾನುಗಳು, ನಕ್ಷತ್ರಮಂಡಲ, ಆಕಾಶಕ್ಕೆ ಮುತ್ತಿಡುವ ಮಿನುಗುವ ಪ್ರಖರ ಬೆಳಕಿನ ಪುಂಜ  ಹೂಮಾಲೆಯಂತೆ ಕಾಣುವ ವಿದ್ಯುತ್ ದೀಪಗಳು ನೀರಿನ ಅಲೆಗಳಂತೆ ತೇಲುವ ವಿದ್ಯುತ್ ದೀಪಗಳು ಜನಮನವನ್ನು ಆಕರ್ಷಿಸುತ್ತವೆ. 
Please follow and like us:
error

Related posts

Leave a Comment