ತುಕಾರಾಮ್ ನಾಯಕ್‌ರಿಗೆ ಪಿಎಚ್.ಡಿ ಪದವಿ

ಹಿರೇವಂಕಲಕುಂಟಾದ ಸರಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ   ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ತುಕಾರಾಮ್ ನಾಯಕ್‌ರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ದೊರಕಿದೆ. ಸ್ವಾತಂತ್ರ್ಯಪೂರ್ವ ಹೈದ್ರಾಬಾದ್ ಕರ್ನಾಟಕದ ಸಾಹಿತ್ಯ ಅಧ್ಯಯನ ಎಂಬ ವಿಷಯದ ಮೇಲೆ ಮಹಾಪ್ರಬಂಧವನ್ನು ಪ್ರಾಧ್ಯಾಪಕರಾದ ಡಾ.ಅಮರೇಶ ನುಗಡೋಣಿ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಪಿಎಚ್.ಡಿ ಪದವಿ ಪಡೆದ ತುಕಾರಾಮ್ ನಾಯಕ್‌ರಿಗೆ ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರ, ಡಾ.ವಿ.ಬಿ.ರಡ್ಡೇರ್, ಸಿರಾಜ್ ಬಿಸರಳ್ಳಿ, ಮಹೇಶ ಬಳ್ಳಾರಿ ಸೇರಿದಂತೆ ಕನ್ನಡನೆಟ್.ಕಾಂ ಕವಿಸಮೂಹ ಬಳಗ ಮತ್ತು ಸಕಲ ವಿದ್ಯಾರ್ಥಿ ಬಳಗ ಅಭಿನಂದಿಸಿದೆ.
Please follow and like us:
error