fbpx

ನ.೨೩ ರಂದು ಮಾದಿನೂರು ಶ್ರೀ ಸೋಮೇಶ್ವರ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ.

ಕೊಪ್ಪಳ-21- ತಾಲೂಕಿನ ಮಾದಿನೂರು ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಕಾರ್ಯಕ್ರಮ ನ.೨೩ ರಂದು ಬೆಳಿಗ್ಗೆ ೧೦.೩೦ ಕ್ಕೆ ಜರುಗಲಿದೆ.
ಮೈನಹಳ್ಳಿ-ಬಿಕನಹಳ್ಳಿಯ ಷ.ಬ್ರ.೧೦೮ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೂತನ ಗೋಪುರದ ಕಳಸಾರೋಹಣ ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹಿರೇಸಿಂದೋಗಿಯ ಕಪ್ಪತ್ತ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಹೂವಿನಹಡಗಲಿ ಶಾಖಾ ಶ್ರೀ ಗವಿಮಠದ ಶ್ರೀ ಹಿರೇಶಾಂತವೀರ ಮಹಾಸ್ವಾಮಿಗಳು, ಹಿರೇಮಲ್ಲನಕೇರಿಯ ಶ್ರೀ ಚನ್ನಬಸವೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ದದೇಗಲ್‌ನ ಶ್ರೀ ಸಿದ್ಧಾರೂಢಮಠದ ಶ್ರೀ ಆತ್ಮಾನಂದ ಭಾರತಿ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೂರ್ತೆಯ್ಯ ಹಿರೇಮಠ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಎಂಎಲ್‌ಸಿ ಹಾಲಪ್ಪ ಆಚಾರ, ಕರ್ನಾಟಕ ಹಾಲು ಉತ್ಪಾದನಾ ಒಕ್ಕೂಟದ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಜಿ.ಪಂ.ಸದಸ್ಯರಾದ ವನೀತಾ ಗಡಾದ್, ತಾ.ಪಂ.ಸದಸ್ಯರಾದ ಅಮರೇಶ ಉಪಲಾಪೂರ, ಗೌರಿಬಿದನೂರಿನ ನ್ಯಾಯಾಧೀಶರಾದ ಸಂದೀಪ ಚಂದ್ರಗೌಡ ಮಾ.ಪಾಟೀಲ್, ಬೆಳಗಾವಿಯ ಲೋಕಾಯುಕ್ತ ಎಸ್.ಪಿ. ರವಿಕುಮಾರ ಹ.ನಾಯಕ, ಸರಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ್, ಶ್ರೀ ಹೇಮರೆಡ್ಡಿ ಮಲ್ಲಮ್ಮ ಪ.ಸ.ಸಂ.ನಿ. ಕೊಪ್ಪಳದ ಅಧ್ಯಕ್ಷರಾದ ಸಂಗಮೇಶ ಡಂಬಳ, ಕೊಪ್ಪಳ ತಾಲೂಕ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸುರೇಶ ಭೂಮರೆಡ್ಡಿ, ಮಾದಿನೂರು ಗ್ರಾ.ಪಂ.ಅಧ್ಯಕ್ಷ ಸಣ್ಣ ಮರಿಯಪ್ಪ ರಾಯಪ್ಪ, ಉಪಾಧ್ಯಕ್ಷೆ ಶ್ರೀಮತಿ ಹನುಮವ್ವ ಮರಿಯಪ್ಪ, ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿಯಮಿತದ ಅದ್ಯಕ್ಷ ವೀರೇಶ ತಾವರಗೇರಾ, ಮಾದಿನೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಭೀಮಸೇನ ಅಡವಿ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗಪ್ಪ ಸವಿಮನಿ, ಬೆಂಗಳೂರಿನ ಡಾ.ವಿಷ್ಣು ಹೈಗ್ರೀವ್, ಕಿನ್ನಾಳದ ಡಾ.ಎಸ್.ಎಂ.ಕುರ್ತಕೋಟಿ, ಹಿರಿಯ ಸಾಹಿತಿಗಳಾದ ಡಾ.ಮಹಾಂತೇಶ ಮಲ್ಲನಗೌಡರ, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ಎಲಿಗಾರ, ಕೊಪ್ಪಳ ತಾಲೂಕ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನಾಧಿಕಾರಿ ಸುರೇಂದ್ರ ನಾಯಕ, ಸ್ವಾತಂತ್ರ್ಯ ಯೋಧರಾದ ಕೃಷ್ಠಾಚಾರ ಅಡವಿ, ಶ್ರೀ ವಿಷ್ಣುತೀರ್ಥ ಬೃಂದಾವನದ ಅರ್ಚಕರಾದ ವಸಂತ ಪೂಜಾರ, ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ನಿಯಮಿತದ ವಿ.ಅಧಿಕಾರಿ ಶ್ರೀಪಾದರಾವ್ ದೇಶಪಾಂಡೆ, ಅಬಕಾರಿ ಇಲಾಖೆಯ ನಿ.ಉಪಧೀಕ್ಷಕರಾದ ಮುದಿಯಪ್ಪರಡ್ಡಿ ನರಸಮ್ಮನವರ, ನಿವೃತ್ತ ತಹಶೀಲ್ದಾರ ಈರಣ್ಣ ದೊಡ್ಡಪ್ಪ ಭೃಂಗಿ, ಗಂಗಾವತಿಯ ಸಿ.ಎ. ಸಿ.ಎಸ್.ಆಡೂರು, ನಿವೃತ್ತ ಅರಣ್ಯಾಧಿಕಾರಿ ಎ.ವಿ.ಪಾಟೀಲ್, ವಕೀಲರಾದ ಎಸ್.ಪಿ.ಗೋನಾಳ, ಗದಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಗವಿಸಿದ್ದಪ್ಪ ನಿ.ಗೋನಾಳ, ವಕೀಲರಾದ ರಾಜಶೇಖರಗೌಡ ಮಾ.ಪಾಟೀಲ್, ತಮಿಳುನಾಡಿನ ಗೋಪುರದ ಶಿಲ್ಪಿಗಳಾದ ಹರಿಹರನ್, ಕೋಲಾರ ಗೋಪುರಕ್ಕೆ ವರ್ಣ ಅಲಂಕಾರ ಮಾಡಿದ ಅಶ್ವಥ್ ನಾರಾಯಣ ಆಗಮಿಸುವರು.
ಶ್ರೀ ಸೋಮೇಶ್ವರ ಮೂರ್ತಿ ಮತ್ತು ನೂತನ ಕಳಶ ಭಾಜಾ-ಭಜಂತ್ರಿಯೊಂದಿಗೆ, ಸಕಲ ಸದ್ಬಕ್ತರು, ಗುರು ಹಿರಿಯರು, ಕುಂಭ ಹಾಗೂ ಆರತಿಯೊಂದಿಗೆ ಗಂಗೆಗೆ ಹೋಗಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಶ್ರೀ ಸೋಮೇಶ್ವರ ದೇವಸ್ಥಾನ ಪ್ರವೇಶಿಸಲಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಬಕ್ತರು ಆಗಮಿಸಿ ತನು-ಮನ ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಸೋಮೇಶ್ವರ ದೇವರ ದರ್ಶನಾಶೀರ್ವಾದ ಹಾಗೂ ಶ್ರೀಗಳ ಆಶೀರ್ವಾದ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಮಾದಿನೂರು ಶ್ರೀ ಸೋಮೇಶ್ವರ ದೇವಸ್ಥಾನದ ಸಕಲ ಸದ್ಬಕ್ತ ಮಂಡಳಿ ಪ್ ಮೂಲಕ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
Please follow and like us:
error

Leave a Reply

error: Content is protected !!