ಕೇಂದ್ರ ಬಿಜೆಪಿ ಸರಕಾರ ರೈಲು ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮೋಸ

ಕೇಂದ್ರ ಬಿಜೆಪಿ ಸರಕಾರದ ರೈಲು ಪ್ರಯಾಣದರ ಇಳಕೆ ಮತ್ತು ಬಡ-ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಚೆಲ್ಲಾಟ ಆಡಿದಂತಿದೆ. ೯ ತಿಂಗಳ ಅವಧಿಯಲ್ಲಿ ಕಚ್ಚಾತೈಲ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಇಳಿದಿದೆ. ಆದರೆ ರೈಲಿನ ದರ ಇಳಿಸದೇ ಬಡ, ಮಧ್ಯಮ ವರ್ಗದ ಜನರಿಗೆ ಸರಕಾರ ಮೋಸ ಮಾಡಿದೆ.

ಕರ್ನಾಟಕಕ್ಕೆ ಹೊಸ ಯೋಜನೆಗಳು ಬಗ್ಗೆ ನಿರೀಕ್ಷೆ ಇತ್ತು. ಆದರೆ ಕೇಂದ್ರ ಸರಕಾರ ನಿರೀಕ್ಷೆಯನ್ನು ಹುಸಿ ಮಾಡಿದೆ. ಸದಾನಂದಗೌಡರು ಸಚಿವರಾಗಿ ಘೋಷಿಸಿದ ೨೪ ಯೋಜನೆಗಳ ಪೈಕಿ ಅರ್ಧದಷ್ಟು ಜಾರಿಯಾಗಿಲ್ಲ. ಆದ್ದರಿಂದ ಕೇಂದ್ರ ಸರಕಾರ ಮಂಡಿಸಿದ ರೈಲು ಬಜೆಟ್ ಕರ್ನಾಟಕಕ್ಕೆ ಸಂಪೂರ್ಣವಾಗಿ ಮೋಸ ಮಾಡಿದಂತೆ ಇದೆ. ಇದೆ ರೀತಿ ಜನರಿಗೆ ಮೋಸ ಮಾಡಿದರೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡುತ್ತಾರೆಂದು ಜಿಲ್ಲಾಧ್ಯಕ್ಷರಾದ ರಮೇಶ ಕೋಟಿ   ತಿಳಿಸಿದ್ದಾರೆ.
Please follow and like us:
error